ಮಂಗಳೂರಿನಲ್ಲಿ ‘EDU Connect Expo 2026’: ವಿದ್ಯಾರ್ಥಿಗಳಿಗೆ ಕರಿಯರ್ ಮಾರ್ಗದರ್ಶನದ ಬೃಹತ್ ವೇದಿಕೆ

ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ನಂತರ ಮುಂದೇನು ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸರಿಯಾದ ದಾರಿ ತೋರಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಬೃಹತ್ ಶೈಕ್ಷಣಿಕ ಮೇಳ ‘EDU Connect Expo 2026 ಆಯೋಜಿಸಲಾಗಿದೆ ಎಂದು ತುಂಬೆಜಾ ಪಬ್ಲಿಸಿಟಿ ಸಂಸ್ಥೆಯ ಸಿಇಓ ಶಕೀಲ್ ತುಂಬೆಜಾ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 27 ಮತ್ತು 28 ರಂದು ಮಂಗಳೂರಿನ ಪಂಪ್‌ವೆಲ್ ಸರ್ಕಲ್ ಬಳಿ ಇರುವ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿಈ ಎಕ್ಸ್ಪೋ ನಡೆಯಲಿದೆ. ಈ ಮೇಳಕ್ಕೆ ಅಸ್ಟ್ರಾ ಗೋಲ್ಡ್ ಅಂಡ್ ಡೈಮಂಡ್ಸ್ ಸಹಯೋಗ ನೀಡುತ್ತಿದೆ. ಮಂಗಳೂರಿನ ಪ್ರತಿಷ್ಠಿತ 35ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿದ್ದು, ಒಂದೇ ಸೂರಿನಡಿ 300ಕ್ಕೂ ಅಧಿಕ ಕೋರ್ಸ್‌ಗಳ ಬಗ್ಗೆ ಸಮಗ್ರ ಮಾಹಿತಿ ಲಭ್ಯವಿರಲಿದೆ ಎಂದು ತಿಳಿಸಿದರು .

ಎಂಜಿನಿಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ಫಾರ್ಮಸಿ, ಮ್ಯಾನೇಜ್‌ಮೆಂಟ್, ಆರ್ಟ್ಸ್ ಹಾಗೂ ವಿಜ್ಞಾನ ವಿಭಾಗದ ಕೋರ್ಸ್‌ಗಳಲ್ಲದೆ, ಕೃತಕ ಬುದ್ಧಿಮತ್ತೆ (AI), ಸೈಬ‌ರ್ ಸೆಕ್ಯೂರಿಟಿ, ಡಿಸೈನ್ ಮತ್ತು ಕ್ರಿಯೇಟಿವ್ ಫೀಲ್ಡ್, ಕಾನೂನು ಹಾಗೂ ವಿದೇಶಿ ಶಿಕ್ಷಣದ ಬಗ್ಗೆಯೂ ತಜ್ಞರಿಂದ ಮಾರ್ಗದರ್ಶನ ನೀಡಲಾಗುವುದು. ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಈ ವೇದಿಕೆ ಸಹಕಾರಿಯಾಗಲಿದೆ ಎಂದರು.

ಕಾಲೇಜು ಪ್ರತಿನಿಧಿಗಳೊಂದಿಗೆ ನೇರ ಸಂವಾದಕ್ಕೆ ಅವಕಾಶವಿದೆ. ಸ್ಥಳದಲ್ಲಿಯೇ ಸಂಶಯ ಪರಿಹರಿಸಲು ‘ಡೌಟ್ ಕ್ಲಿಯರಿಂಗ್ ಮತ್ತು ಕರಿಯ‌ರ್ ಕೌನ್ಸಲಿಂಗ್ ವ್ಯವಸ್ಥೆದೆ. ಶೈಕ್ಷಣಿಕ ಸಾಲ (Education Loan) ಮತ್ತು ಸ್ಕಾಲರ್‌ಶಿಪ್‌ಗಳ ಬಗ್ಗೆ ಮಾಹಿತಿ, ಪ್ರೇರಣಾದಾಯಕ ಭಾಷಣಕಾರರಾದ ಸಹ್ಯಾ ಪರ್ವೀನ್ ಮತ್ತು ಡಾ. ರಾಹುಲ್ ದೇವ್‌ರಾಜ್ ಅವರಿಂದ ವಿಶೇಷ ಸೆಷನ್‌ಗಳು ನಡೆಯಲಿದೆ. ಅಲ್ಲದೆ ಭಾಗವಹಿಸುವ ವಿದ್ಯಾರ್ಥಿಗಳಿಗೆ ‘Participation Certificate ವಿತರಣೆ ನಡೆಯಲಿದೆ ಎಂದರು.

ಈ ಎರಡು ದಿನಗಳ ಶೈಕ್ಷಣಿಕ ಮೇಳಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿದ್ದು, ಕ್ಯೂಆರ್ ಕೋಡ್ ಆಧಾರಿತ ನೋಂದಣಿ ವ್ಯವಸ್ಥೆ ಇರಲಿದೆ. ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಮೇಳ ನಡೆಯಲಿದ್ದು, ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಹರಿಕೃಷ್ಣ ಮತ್ತು ಮಹಮ್ಮದ್ ಹುಜೈಫ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!