ಮಂಗಳೂರು:- ಶಕ್ತಿನಗರ ಕ್ಲಾಸಿಕ್ ಪರ್ಲ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ ಸುನೀಲ್ ಶಂಕರ್ ಬೇಕಲ್ (48) ಎಂಬವರಿಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಪಘಾತವಾಗಿದ್ದು, ಸರಕಾರಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದು, ಎಪ್ರಿಲ್ 2 ರಂದು ಆಸ್ಪತ್ರೆಯಿಂದ ಮನೆಗೆ ಬಂದವರು ಅಲ್ಲಿಂದ ನೇರವಾಗಿ ಯಾರಿಗೂ ತಿಳಿಸದೇ ಮನೆ ಬಿಟ್ಟು ಹೋಗಿರುತ್ತಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ: ಎತ್ತರ 5.9 ಅಡಿ, ಗೋಧಿ ಮೈಬಣ್ಣ, ಕಪ್ಪು ಕೂದಲು, ಸಾಧಾರಣ ಶರೀರ, ಕನ್ನಡ, ಹಿಂದಿ, ಇಂಗ್ಲಿಷ್, ತುಳು, ತಮಿಳು, ತೆಲುಗು ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.