ಪಲ್ಗುಣಿ ನದಿಯಲ್ಲಿ ಮೀನುಗಳ ಮಾರಣಹೋಮ: ಮಾಲಿನ್ಯಕ್ಕೆ ಜನರ ಆಕ್ರೋಶ

ಮಂಗಳೂರು: ಪಲ್ಗುಣಿ ನದಿ‌ ಕಲುಶಿತಗೊಂಡಿದೆ. ಅದರ ದೇಖಿ ರೇಖಿ ನೋಡಬೇಕಾದ ಮಂಗಳೂರು‌ ಮಹಾನಗರ ಪಾಲಿಕೆ ಕಣ್ಣು‌ಮುಚ್ಚಿ,‌ಕಿವಿ ಮುಚ್ಚಿ, ಬಾಯಿ ಮುಚ್ಚಿ ಕುಳಿತಿದೆ. ಪಾಲಿಕೆ ನಿರ್ಲಕ್ಷಕ್ಕೆ ರಾಶಿ ರಾಶಿ‌ ಮೀನುಗಳು ಸಾಯುತ್ತಿವೆ. ಮಂಗಳೂರು ನಗರದ ಹೊರವಲಯದ ಮಳವೂರು ಕೆಂಜಾರ್ ವ್ಯಾಪ್ತಿಯಲ್ಲಿ ಹರಿಯುವ ಪಲ್ಗುಣಿ ನದಿ ಕೆಲ ವರ್ಷಗಳ‌ ಹಿಂದೆ ಜೀವಂತ ನದಿಯಾಗಿತ್ತು. ಮೀನುಗಳು ಬದುಕಿಕೊಂಡಿದ್ದವು. ನೀರೂ ಸ್ವಚ್ಚವಾಗಿತ್ತು. ಈಗ ಅದು‌ ಮೀನುಗಳಿಗೆ ರುದ್ರಭೂಮಿಯಾಗಿದೆ. ಎಲ್ಲಿ ನೋಡಿದರೂ ಸತ್ತು ತೇಲುತ್ತಿರುವ ಜಲಚರಗಳ ರಾಶಿ‌ ಕಾಣುತ್ತಿದೆ.

ಇತ್ತೀಚೆಗಷ್ಟೇ ಕಪ್ಪು ಬಣ್ಣಕ್ಕೆ ತಿರುಗಿದ್ದ ನದಿ ನೀರು, ನಿನ್ನೆ ರಾತ್ರಿಯ ವೇಳೆಗೆ ಮೀನುಗಳ ಪಾಲಿಗೆ ವಿಷವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಇಲ್ಲಿನ ಕೈಗಾರಿಕೆಗಳಿಂದ ಹರಿದುಬರುತ್ತಿರುವ ವಿಷಕಾರಿ ತ್ಯಾಜ್ಯ ಎನ್ನುವುದು ಸ್ಥಳೀಯರ ನೇರ ಆರೋಪ. ವರ್ಷಗಳಿಂದ ಈ ಸಮಸ್ಯೆ ಇದೆ. ನದಿ ನೀರು ಪೂರ್ತಿ ಕಪ್ಪಾಗಿದೆ. ಬರೀ ನದಿ ಮಾತ್ರವಲ್ಲ, ನಮ್ಮ ಮನೆಯ ಬಾವಿ ನೀರು ಕೂಡ ಕಲುಷಿತಗೊಂಡಿದೆ. ಯಾರೂ ನಮ್ಮ ಕಷ್ಟ ಕೇಳುವವರಿಲ್ಲ.” ಎಂದು ಅಳಲು ತೋಡಿಕೊಳುತ್ತಾರೆ ಸ್ಥಳೀಯರು

ಇದು ಕೇವಲ ಮಳವೂರು ಭಾಗದ ಕಥೆಯಲ್ಲ, ಬಜಪೆ ಪಂಚಾಯತ್ ವ್ಯಾಪ್ತಿಯ ಹಲವು ನದಿ ಮೂಲಗಳು ಇಂದು ಮಾಲಿನ್ಯದ ಸುಳಿಗೆ ಸಿಲುಕಿವೆ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪಂಚಾಯತ್ ಈಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದೆ.

ಬೈಟ್ …

ಘಟನೆ ತಿಳಿಯುತ್ತಿದ್ದಂತೆಯೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಚ್ಚನಾಡಿ ಎಸ್.ಟಿ.ಪಿ. ಘಟಕದಿಂದ ಸಂಸ್ಕರಿಸದ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆಯೇ ಎಂಬ ಸಂಶಯ ವ್ಯಕ್ತವಾಗಿದ್ದು, ಅಧಿಕಾರಿಗಳು ನದಿ ಮತ್ತು ಬಾವಿ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ಬಲಿ ಕೊಡಲಾಗುತ್ತಿದೆ. ಪಾಲಿಕೆಯ ನಿರ್ಲಕ್ಷ್ಯ ಮತ್ತು ಕೈಗಾರಿಕೆಗಳ ಲಾಭದ ಆಸೆಗೆ ಇವತ್ತು ಜೀವನದಿಯಾಗಿದ್ದ ಪಲ್ಗುಣಿ ಕಲುಷಿತಗೊಂಡಿದೆ. ಸತ್ತ ಮೀನುಗಳು ಅಧಿಕಾರಿಗಳ ಕಣ್ಣು ತೆರೆಸುತ್ತವೆಯೇ ಅಥವಾ ಜನರು ಮತ್ತಷ್ಟು ಸಂಕಷ್ಟ ಅನುಭವಿಸಬೇಕೇ ಎನ್ನುವುದನ್ನು ಕಾದುನೋಡಬೇಕಿದೆ.

ಅಭಿವೃದ್ಧಿ ಎಂಬುದಕ್ಕೆ ಮನುಷ್ಯನ ಪಾಲಿಗೆ ಸೌಕರ್ಯಗಳನ್ನು ಒದಗಿಸುವುದೇ ಆದ್ಯತೆಯಾಗಿದೆ. ನಗರದಲ್ಲಿ‌ ವಸತಿ‌ ಬಡಾವಣೆಗಳು ಹೆಚ್ಚುತ್ತಿವೆ.ಉತ್ಪತ್ತಿಯಾಗುವ ತ್ಯಾಜ್ಯವೂ ಹೆಚ್ಚುತ್ತಿದೆ. ಅದನ್ನು ಸಂಸ್ಕರಿಸಬೇಕು ಎಂಬ ನಿಯಮವೂ ಇದೆ. ಆದರೆ ಅದು‌ ಕಾಗದದಲ್ಲಿದೆ. ಮೀನುಗಳಿಗೂ‌ ಮತ ಹಾಕುವ ಅಧಿಕಾರ ಇದ್ದಿದ್ದರೆ ಅವುಗಳು ಬದುಕುತ್ತಿದ್ದವೋ ಏನೋ.

ಸಾಯುವ ಕಾಲಕ್ಕೆ ಮೀನುಗಳೂ ತಮ್ಮ ಬದುಕುವ ಅಧಿಕಾರ ಕಸಿದು ಕೊಂಡ ಅಧಿಕಾರಿ ಸಂತಾನಕ್ಕೆ ನೀವೂ, ನಿಮ್ಮ ಮಕ್ಕಳೂ ಆಮ್ಲಜನಕ ಸಿಗದೆ‌ ಸಾಯಿರಿ ಎಂದು ಶಾಪ ಹಾಕಿರಲೂ ಬಹುದು.ಅದರಲ್ಲಿ ಆ ಪಕ್ಷ, ಈ ಪಕ್ಷ ಎನ್ನದೆ ಸರ್ವ ಪಕ್ಷದ ರಾಜಕಾರಣಿಗಳಿಗೂ ಒಂದು ಪಾಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!