ಕಾಸರಗೋಡಿನಲ್ಲಿ ಕನ್ನಡ ಸಂಭ್ರಮ: ಮೇ 16ರಂದು ಸಂಸ್ಕೃತಿ ಉತ್ಸವ

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿಪದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಮೇ 16ರಂದು ಬೆಳಗ್ಗೆ 9ರಿಂದ ಸುಬ್ಬಯ್ಯಕಟ್ಟೆ ಕುಡಾಲ್ ಮೇರ್ಕಳದ ಕುಡಾಲು ಅನುದಾನಿತ ಕಿ.ಪ್ರಾ.ಶಾಲೆ ವಠಾರದಲ್ಲಿ ನಡೆಯಲಿದೆ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಕಾಸರಗೋಡು ಇದರ ಸಂಸ್ಥಾಪಕರಾದ
ಎಸ್ ಪ್ರದೀಪ ಕುಮಾರ ಕಲ್ಕೂರ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಬಾರಿ 18 ಮಂದಿಗೆ ದತ್ತಿನಿಧಿ ಪ್ರಶಸ್ತಿಯನ್ನು ಪುರಸ್ಕಾರ ಮಾಡಲಾಗುವುದು . ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಣ್ಣ ನಿರಾವರಿ ಸಚಿವ ಎನ್.ಎಸ್. ಬೋಸರಾಜು ಉದ್ಘಾಟಿಸುವರು. ನಿಯೋಜಿತ ಮಂಜೇಶ್ವರ ಶಾಸಕ ಎ.ಕೆ.ಎಂ.ಆಶ್ರಫ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡುವರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಗಡಿನಾಡ ಸಾಧಕರನ್ನು ಸನ್ಮಾನಿಸುವರು .

ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಪತ್ರಕರ್ತರ ಗುರುತುಚೀಟಿ ವಿತರಿಸುವರು. ಶಾಫಿ ಬಂಡಸಾಲ ದುಬೈ ಅವರ “ಮನದಾಳದಿಂದ” ಪುಸ್ತಕ ಬಿಡುಗಡೆಗೊಳಿಸಲಾಗುವುದು. ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ಪುಸ್ತಕ ಬಿಡುಗಡೆಗೊಳಿಸುವರು ಎಂದರು .

ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ, ಸದಸ್ಯ ಸೋಮಶೇಖರ್ ಜೆಎಸ್., ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಅಧ್ಯಕ್ಷ ಶಿವಾನಂದ ತಗಡೂರು, ಪ್ರಾರ್ಥನಾ ವರ್ಲ್ಡ್ ಸ್ಕೂಲ್ ಬೆಂಗಳೂರು ಅಧ್ಯಕ್ಷ ಕರ್ಣ ಬೆಳಗೆರೆ, ಕಲ್ಕೂರ ಪ್ರತಿಷ್ಠಾನ ಮಂಗಳೂರು ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಯ್ಯದ್ ಯು.ಕೆ ಸೈಫುಲ್ಲಾ ತಂಬಳ್, ಸದಸ್ಯ ಬಶೀರ್ ಕೊಟುಡಲ್, ಕೇರಳ ಸರಕಾರದ ಜೀವ ವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ, ಡಿವೈಎಸ್ಪಿ ಡಾ. ವಿ.ಬಾಲಕೃಷ್ಣನ್, ಪೈವಳಿಕೆ ಗ್ರಾಪಂ ಸದಸ್ಯರುಗಳಾದ ಶ್ರೀನಿವಾಸ ಮಾಸ್ಟರ್ ಕೆ.ಎಚ್., ಶಶಿಕಲ ರೈ, ಅಬ್ದುಲ್ ಆಝೀಝ್ ಸಿ.ಎಂ., ಮಂಜೇಶ್ವರ ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ಡ, ಕ.ಸಾ.ಪ ಕೇರಳ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ, ಕಲಾಪೋಷಕ ಉದ್ಯಮಿ ಜೇಮ್ಸ್ ಮೆಂಡೋನ್ಸಾ ದುಬೈ ಮುಖ್ಯ ಅತಿಥಿಗಳಾಗಿ ಭಾಗವಹಿಔವರು. ಕ.ಜಾ.ಪ ಕೇರಳ ಘಟಕ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್.ನಾಸಿ, ಧಾರ್ಮಿಕ, ಸಾಮಾಜಿಕ ಮುಖಂಡ ಅರಿಬೈಲು ಗೋಪಾಲ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ.ಜಿಲ್ಲಾ ಸಮಿತಿ, ಮಂಗಳೂರು ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಕೆ.ಯು.ಡಬ್ಲ್ಯೂ.ಜೆ. ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಕೇರಳ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ ಉಳಿಯತಡ್ಕ, ಗಡಿನಾಡ ಉತ್ಸವ ಸಮಿತಿ ಮಸ್ಕತ್ ಪ್ರಧಾನ ಸಂಚಾಲಕ ಶಿವಾನಂದ ಕೋಟ್ಯಾನ್, ಮಂಗಳೂರು ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯರುಗಳಾದ ಭಗತರಾಜ್ ನಿಜಾಮಕರ್, ಜಾಣಗೆರೆ ವೆಂಕಟರಾಮಯ್ಯ, ಡಾ.ಎಂ.ಎಸ್.ಮದಬಾವಿ, ಅಶೋಕ ಚಂದರಗಿ, ಡಾ. ಸಂಜೀವ ಕುಮಾರ್ ಅತಿವಾಳೆ, ಶಿವರೆಡ್ಡಿ ಬ್ಯಾಡೆದ್, ಕೆ.ಯು.ಡಬ್ಲ್ಯೂ.ಜೆ. ಕಾಸರಗೋಡು ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಕಜಾಪ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಕಾಸರಗೋಡು ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಸೌಮ್ಯ ಗೌಡ ಬೆಂಗಳೂರು, ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಉಪಸ್ಥಿತರಿರುವರು.

ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ

ಪೈವಳಿಕೆ ಗ್ರಾಪಂ ಅಧ್ಯಕ್ಷೆ ಬದರುನ್ನೀಸ ಸಲೀಂ ಮತ್ತು ಹಿರಿಯ ಸಮಾಜ ಸೇವಕ ಭಂಡಾರಗುತ್ತು ಸೀತಾರಾಮ ಶೆಟ್ಟಿ ಬೆಳಗ್ಗೆ 9ಕ್ಕೆ ಶೋಭಾಯಾತ್ರೆಗೆ ಚಾಲನೆ ನೀಡುವರು. 9.30ರಿಂದ ಗೋನಾ ಸ್ವಾಮಿ, ಡಾ.ಕೆ.ಎನ್. ನಾಗೇಶ್ ಬೆಂಗಳೂರು ಮತ್ತು ಬಳಗದ ಸುಗಮ ಸಂಗೀತ, 10ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಟಾಸ್ಕ್ ಸುಬ್ಬಯ್ಯಕಟ್ಟೆ, ಮಾಸ್ಕ್ ಕುಡಾಲ್, ರೆಡ್ ಬಾಯ್ಸ್ ಕುಂಟಂಗೇರಡ್ಕ, ಶ್ರೀಹರಿ ಕನಕಪ್ಪಾಡಿ, ರಕ್ಷಕ ಶಿಕ್ಷಕ ಸಂಘ ಕುಡಾಲು ಕಿ.ಪ್ರಾ.ಶಾಲೆ, ಕುಟುಂಬಶ್ರೀ ಸ್ವ-ಸಹಾಯ ಸಂಘ ಘಟಕಗಳ ಸದಸ್ಯರು ಸಹಕರಿಸುವರು.

ಪತ್ರಿಕಾಗೋಷ್ಟಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ಅಶೋಕ ಭಂಡಾರಿ ಕುಡಾಲ್ , ಕೆ.ಯು.ಡಬ್ಲ್ಯೂ.ಜೆ ಬೆಂಗಳೂರು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಧಾಕೃಷ್ಣ ಕೆ ಉಳಿಯತಡ್ಕ ,ಕೆ ಯು ಡಬ್ಲ್ಯೂ ಜೆ ಕಾಸರಗೋಡು ಇದರ ಅಧ್ಯಕ್ಷರಾದ ಎ ಆರ್ ಸುಬ್ಬಯಕಟ್ಟೆ ಸದಸ್ಯರಾದ ರಾಘವ ಚೇರಾಲ್‌ , ರವಿ ನಾಯ್ಕಪ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!