ಸಚಿವ ಸುಧಾಕರ್ ನಿಧನ: ಕರಾವಳಿ ಮಂಡಳಿಯಲ್ಲಿ ಶ್ರದ್ಧಾಂಜಲಿ

ಮಂಗಳೂರು- ಕರ್ನಾಟಕ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ. ಸುಧಾಕರ್ ಅವರು ಅನಾರೋಗ್ಯದ ಕಾರಣದಿಂದ ಮೇ 10 ರಂದು ವಿಧಿವಶರಾಗಿದ್ದಾರೆ. ಈ ಪ್ರಯುಕ್ತ ಸೋಮವಾರ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಪೂರ್, ಕಾರ್ಯದರ್ಶಿ ಪ್ರದೀಪ್ ಡಿಸೋಜಾ, ಮಂಡಳಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮಂಗಳೂರಿನ ಮಂಡಳಿಯ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ನಡೆಸಿದರು.


ಸಭೆಯಲ್ಲಿ ಯೋಜನಾ ಇಲಾಖೆಯ ಸಚಿವ ಡಿ. ಸುಧಾಕರ್ ಅವರ ಅಗಲಿಕೆಯ ಕುರಿತು ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಸಂತಾಪ ಸೂಚಿಸಿ, ನುಡಿ ನಮನ ಸಲ್ಲಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!