ಬನ್ನಡ್ಕ ಸರಣಿ ಅಪಘಾತಗಳಿಗೆ ಕಿಡಿಕಾರಿದ ಬಿಜೆಪಿ ಕಾರ್ಯಕರ್ತರು: ಸಂಸದ ಬ್ರಿಜೇಶ್ ಚೌಟ ವಿರುದ್ಧ ಆಕ್ರೋಶ

ಮಂಗಳೂರು :ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ವಿರುದ್ಧ ಕಾರ್ಯಕರ್ತರು ಗರಂ ಆದ ಘಟನೆ ನಡೆದಿದೆ.ಇದು
‘ಇಂಥವರು ನಮ್ಮ ಜನಪ್ರತಿನಿಧಿಯಾಗಿದ್ದು ನಮ್ಮ ದುರಂತ ‘ ಎಂದು ಹೇಳುವಲ್ಲಿಗೆ ತಲುಪಿದೆ.

ಬಿಜೆಪಿ ಮಂಡಲ ಉಪಾಧ್ಯಕ್ಷರೇ ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನದ ಪೋಸ್ಟ್ ಹರಿದಾಡತೊಡಗಿದೆ.ರಸ್ತೆ ಸಮಸ್ಯೆಗೆ ಪರಿಹಾರ ಕೇಳಲು ಹೋದ ಬಿಜೆಪಿ ಮುಖಂಡರಿಗೆ ಅಧಿಕಾರಿಗಳ ಎದುರು ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.ಇದು ಸಾಮಾಜಿಕ ಜಾಲತಾಣಗಳಲ್ಲಿ ಸಂಸದ ಬ್ರಿಜೇಶ್ ಚೌಟ ವಿರುದ್ಧ ಆಕ್ರೋಶದ ಕಿಚ್ಚು ಹರಡಲು ಪ್ರೇರಣೆ ನೀಡುತ್ತಿದೆ.

ಮೂಲ್ಕಿ -ಮೂಡಬಿದ್ರೆ ಬಿಜೆಪಿ ಉಪಾಧ್ಯಕ್ಷ ಸೂರಜ್ ಜೈನ್ ಬ್ರಿಜೇಶ್ ಚೌಟರ ವರ್ತನೆ ಬೇಜವಾಬ್ದಾರಿತನದ್ದು ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.’ಜನರ ಪ್ರತಿಭಟನೆಗೆ ನಾನು ಹೆದರೋದಿಲ್ಲ’ ಎಂದು ಸಂಸದರು ಹೇಳಿದರು ಎಂಬ ಮಾತು ಕೂಡಾ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ.ಮೂಡಬಿದಿರೆಯ ಬನ್ನಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಸಾವು ಪ್ರಕರಣಗಳ ಹಿನ್ನೆಲೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇಲ್ಲಿ
ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದೆ ಎನ್ನುವ ಆರೋಪ ಇದ್ದು, ಸುಮಾರು 8 ಜೀವಗಳು ಬಲಿಯಾಗಿವೆ.

ಸರ್ವಿಸ್ ರಸ್ತೆ ಇಲ್ಲದೆ ಭೀಕರ ಸರಣಿ ಅಪಘಾತಗಳು ಸಂಭವಿಸುತ್ತಿವೆ.ಮಂಗಳೂರಿನಿಂದ ಕಾರ್ಕಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ಈ ಅವಾಂತರಕ್ಕೆ‌ ಕಾರಣ. ಮೂರು ವರ್ಷಗಳಲ್ಲಿ ಅಪಘಾತದಲ್ಲಿ 8 ಜೀವಗಳು ಬಲಿಯಾಗಿವೆ.

ಸರ್ವಿಸ್ ರಸ್ತೆ ಇಲ್ಲದೆ ಸುಮಾರು 20 ಸರಣಿ ಅಪಘಾತ ಸಂಭವಿಸಿವೆ.ಕೇವಲ ಮೂರು ದಿನಗಳಲ್ಲಿ 4 ಅಪಘಾತ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಈ ವಿಚಾರವಾಗಿ ಸಂಸದರನ್ನ ಭೇಟಿಯಾಗಲು ಬಿಜೆಪಿ ಮುಖಂಡ ಸೂರಜ್ ಜೈನ್ ತಂಡ ಹೋಗಿತ್ತು.ಈ ವೇಳೆ ಸಂಸದ ಬ್ರಿಜೇಶ್ ಚೌಟ ಉಡಾಫೆ ಉತ್ತರ ನೀಡಿದರು ಎನ್ನಲಾಗಿದೆ.“ಈ ಅವಘಡಗಳಿಗೆ ಹೆದ್ದಾರಿ ಇಲಾಖೆಯೆ ಕಾಮಗಾರಿಯೆ ಕಾರಣ ಎಂದು ನೀವು ಹೇಗೆ ಹೇಳುತ್ತೀರಿ? ಎಂದವರು ಪ್ರಶ್ನಿಸಿದರು ಎನ್ನಲಾಗಿದೆ.

ಈ ಕಾಮಗಾರಿ ಪೂರ್ಣ ಆಗುವವರೆಗೆ ಸರ್ವಿಸ್ ರಸ್ತೆ ಮಾಡಲು ಸಾದ್ಯವಿಲ್ಲ.2023 ರಲ್ಲಿ ಮನವಿ ಕೊಟ್ಟಿದ್ದರೆ ಕೊಟ್ಟಿರುವವರ ಬಳಿ ಹೋಗಿ ಕೇಳಿ.. !! ಎಂದೂ ಸಂಸದರು‌ ಹೇಳಿದರು ಎನ್ನಲಾಗುತ್ತಿದೆ.

“ನೀವೂ ಹೇಳಿದಂತೆ ಕಾಮಗಾರಿ ಮಾಡಲು ಸಾದ್ಯವಿಲ್ಲ..ಜನರ ಪ್ರತಿಭಟನೆಗೆ ನಾನು ಹೆದರೊದಿಲ್ಲ.
ಸ್ಥಳಕ್ಕೆ ಭೇಟಿ ನೀಡಲು ಕೇಳಿಕೊಂಡರೆ ಸದ್ಯಕ್ಕೆ ಸಾಧ್ಯವಿಲ್ಲ ಆ ಕಡೆ ಬಂದಾಗ ಸ್ಥಳಕ್ಕೆ ಬರುತ್ತೇನೆ ಎನ್ನುವ ಉಢಾಫೆಯ ಉತ್ತರವನ್ನು ಸಂಸದರು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.ಬನ್ನಡ್ಕ ಸರಣಿ ಅಪಘಾತಗಳನ್ನ ಕಂಡು ಸಾರ್ವಜನಿಕರು ಧೃತಿಗೆಟ್ಟಿದ್ದಾರೆ.ಇತ್ತ ಸಂಸದರ ಉದಾಫೆ ಉತ್ತರ ಅವರನ್ನು ಕಂಗಾಲು‌ ಮಾಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!