ಪುತ್ತೂರು: ಮಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 9 ಮಂದಿ ನೌಕರರನ್ನು ಸಂಸ್ಥೆ ವಜಾಗೊಳಿಸಿದ್ದು, ಮೇ 31ರ ಬಳಿಕ ಕೆಲಸಕ್ಕೆ ಬಾರದಂತೆ ನೋಟಿಸ್ ನೀಡಿತ್ತು.ವಜಾಗೊಂಡ ನೌಕರರು ಇಂದು ಪುತ್ತೂರು ಶಾಸಕ ಅಶೋಕ್ ರೈ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ವಜಾಗೊಂಡವರಲ್ಲಿ ಮಂಗಳೂರು, ಪುತ್ತೂರು ಸೇರಿದಂತೆ ವಿವಿಧ ತಾಲೂಕಿನ 5 ನರ್ಸ್ಗಳು ಹಾಗೂ ಲ್ಯಾಬ್ ಸೆಕ್ಷನ್ನಲ್ಲಿ ಕೆಲಸ ಮಾಡುತ್ತಿದ್ದ 4 ಮಂದಿ ಸಿಬ್ಬಂದಿ ಇದ್ದಾರೆ.ಸಿಬ್ಬಂದಿ ಹೊರೆ ಇಳಿಸುವ ಉದ್ದೇಶದಿಂದ ಇಲಾಖೆ ಈ ಕ್ರಮ ಕೈಗೊಂಡಿತ್ತು ಎಂದು ತಿಳಿದುಬಂದಿದೆ.ನೌಕರರ ಅಹವಾಲು ಆಲಿಸಿದ ಶಾಸಕ ಅಶೋಕ್ ರೈ ತಕ್ಷಣವೇ ಆರೋಗ್ಯ ಇಲಾಖೆಯ ಕಮಿಷನರ್ಗೆ ಕರೆ ಮಾಡಿ ವಜಾಗೊಳಿಸಿದ ಎಲ್ಲಾ 9 ಮಂದಿ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚನೆ ನೀಡಿದರು.

ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ನಾವು ಮಂಗಳೂರಿನಿಂದ ಶಾಸಕ ಅಶೋಕ್ ರೈ ಕಚೇರಿಗೆ ಬಂದಿದ್ದೇವೆ. ಅವರು ನ್ಯಾಯಯುತವಾಗಿ ಉಪಚಾರ ಮಾಡಿದರು. ತಕ್ಷಣವೇ ಸಮಸ್ಯೆಗೆ ಸ್ಪಂದಿಸಿ ಸಂಬಂಧಿಸಿದವರಿಗೆ ಕರೆ ಮಾಡಿ ನಮ್ಮನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಇಲ್ಲಿಗೆ ಬಂದ ಕಾರಣ ನಮಗೆ ನ್ಯಾಯ ಸಿಕ್ಕಿದೆ. ಶಾಸಕರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದು ಶಿಲ್ಪ ಪಟಗಾರ ಹೇಳಿದರು.


