ಮಂಗಳೂರು:ಸಂಗೀತ ಭಾರತಿ ಪ್ರತಿಷ್ಠಾನ (ರಿ) ವತಿಯಿಂದ ಜುಲೈ 12, ಭಾನುವಾರ ಸಂಜೆ 5.30ಕ್ಕೆ ನಗರದ ಪುರಭವನದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ರಿಸ್ಟ್ರಿಮ್ ಸಹಯೋಗದಲ್ಲಿ ‘ಸಿತಾರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದರು.
ಕಾರ್ಯಕ್ರಮದ ಮೊದಲ ಭಾಗದಲ್ಲಿ ಬೆಂಗಳೂರುದ ಸಂಜೀವ್ ಕೊರ್ತಿ ಅವರಿಂದ ಸಿತಾರ್ ವಾದನ, ಎರಡನೇ ಭಾಗದಲ್ಲಿ ಗೋವಾದ ಪಂ. ಶಶಾಂಕ್ ಮತ್ತೇದಾರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ತಬ್ಲಾದಲ್ಲಿ ಮಯಾಂಕ್ ಬೆಡೆಕರ್ ಹಾಗೂ ಹಾರ್ಮೋನಿಯಂನಲ್ಲಿ ಗುರುಪ್ರಸಾದ್ ಹೆಗಡೆ ಸಾಥ್ ನೀಡಲಿದ್ದಾರೆ.

ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ 2026ರಲ್ಲಿ ಆಯೋಜಿಸಿರುವ ಏಳು ಸಂಗೀತ ಕಾರ್ಯಕ್ರಮಗಳ ಸರಣಿಯ ಮೊದಲ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್, ಟ್ರಸ್ಟಿಗಳಾದ ಅಂಕುಶ್ ಎನ್. ನಾಯಕ್, ಮುರುಳೀಧರ್ ಜಿ. ಶೆಣೈ ಹಾಗೂ ಖಜಾಂಚಿ ಕರುಣಾಕರ ಬಳ್ಳೂರು ಉಪಸ್ಥಿತರಿದ್ದರು.


