ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯುವತಿಯರು ಠಾಣೆಗೆ ಹೋಗಲು ಹೆದರುತ್ತಿದ್ದಾರೆ : ಸತೀಶ್‌ ಕುಂಪಲ

ಉಳ್ಳಾಲ: ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪುತ್ತೂರಿನ ಯುವತಿ ಪ್ರಕರಣದಲ್ಲಿ ಮನೆಯವರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ. ಯುವತಿಯರು ಪೊಲೀಸ್‌ ಠಾಣೆಗೆ ಹೋಗುವ ಧೈರ್ಯವನ್ನೇ ಕಳೆದುಕೊಂಡಿದ್ದಾರೆ. ಪ್ರಿಯಾಂಕ್‌ ಖರ್ಗೆ ರಾಜ್ಯದ ಗೃಹಖಾತೆಯನ್ನು ಸರಿಯಾಗಿ ನಿಭಾಯಿಸುವ ಅವಶ್ಯಕತೆಯಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಹೇಳಿದ್ದಾರೆ.
ಬಂಟ್ವಾಳದ ಬಿ.ಸಿ.ರೋಡಿನಲ್ಲಿ ಹತ್ಯೆಯಾದ ಲಾವಣ್ಯಳ ಶೌಮಹಜರು ನಡೆಯುತ್ತಿದ್ದ ದೇರಳಕಟ್ಟೆಯ ಕೆ.ಎಸ್‌ ಹೆಗ್ಡೆ ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮದ ಜತೆಗೆ ಮಾತನಾಡಿದರು.


ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಉಂಟಾ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ. ತಿಂಗಳ ಹಿಂದಿನಿಂದ ನೋಡುತ್ತಾ ಬಂದರೆ ಚೂರಿಯನ್ನು ಹಿಡಿದುಕೊಂಡು ಹತ್ಯೆ ಮಾಡಲು ಬರುವುದು , ಹಾಡಹಗಲೇ ಯುವತಿಯ ಕೊಲೆ ನಡೆಯುತ್ತಿದೆ., ರಾಜ್ಯದಲ್ಲಿ ಪ್ರಿಯಾಂಕ ಖರ್ಗೆ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ರೀತಿಯಲ್ಲಿ ಯೋಚನೆ ಮಾಡುತ್ತಿಲ್ಲ .ರಾಜ್ಯದಲ್ಲಿ ಡಿಕೆಶಿ ಸರಕಾರ ಬಂದ ನಂತರ ಜಿಲ್ಲೆಯ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಸಭೆಗಳನ್ನು ನಡೆಸಿದ ಬಳಿಕವೂ ಕೃತ್ಯಗಳು ಆಗುತ್ತಿವೆ ಎಂದರೆ ಅರ್ಥವಿಲ್ಲದಾಗಿದೆ. ಬಿಜೆಪಿ ಅಧಿಕಾರಿಗಳ ಜೊತೆಗೆ ಸಹಕಾರವನ್ನು ನೀಡುತ್ತಾ ಬಂದಿದೆ. ಆದರೆ ಎಸ್.ಪಿ ಅಧೀನದ ಪ್ರದೇಶದಲ್ಲಿ ನಿರಂತರ ಘಟನೆಗಳು ಆಗುತ್ತಿವೆ, ರಾಜಾರೋಷವಾಗಿ ಹಾಡಹಗಲೇ ಬಸ್‌ ನಿಲ್ದಾಣದಲ್ಲಿ ಯುವತಿಯನ್ನು ಹತ್ಯೆ ಮಾಡುತ್ತಾರೆಂದಾದಲ್ಲಿ ಏನರ್ಥ?. ಹುಡುಗಿಯರು ಸ್ಟೇಷನ್ನಿಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿತವಾಗಿದೆ. ಕ್ಷುಲ್ಲಕ ಕಾರಣಕ್ಕೆ ಹತ್ಯೆಯನ್ನೇ ನಡೆಸಿದ್ದಾನೆ, ಹಾಡಹಗಲೇ ಕೊಲೆ ನಡೆಯುವುದು ಎಂದಲ್ಲಿ ಪೊಲೀಸ್‌ ಇಲಾಖೆ ದೌರ್ಬಲ್ಯ ಎಂಬರ್ಥ. ಜಿಲ್ಲೆಯ ಮೂಲೆ ಮೂಲೆಗಳಲ್ಲಿಯೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮನೆಯವರ ಮೇಲೆ ಕೇಸು ದಾಖಲು ಮಾಡುವುದು, ಕೆಲಸಕ್ಕೆ ಹೋಗುವ ಪರಿಸ್ಥಿತಿಯಿಲ್ಲ, ಜಿಲ್ಲೆಯಲ್ಲಿ ಆತಂಕದ ವಾತಾವರಣವಿದೆ, ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಷಡ್ಯಂತ್ರ ನಡೆಯುತ್ತಿದೆ, ಡ್ರಗ್ಸ್‌ ಮಾಫಿಯಾ ಎಲ್ಲೆಡೆ ವಿಸ್ತಾರವಾಗುತ್ತಿದೆ. ಜನ ನಡೆದಾಡುವ ಸ್ಥಿತಿ ಇಲ್ಲದಾಗಿದೆ, ಗೃಹಸಚಿವರೇ ಹುಚ್ಚಾಟವನ್ನು ಬಿಟ್ಟು ಸರಿಯಾದ ಆಡಳಿತ ನಡೆಸಿರಿ. ಜಿಲ್ಲೆಯಲ್ಲಿ ನಡೆಯುವ ವಾತಾವರಣ ಎಂದು ಎಚ್ಚರಿಸಿದ್ದಾರೆ.

ಗಲ್ಲು ಶಿಕ್ಷೆಗೆ ಒಳಪಡಿಸಿರಿ : ಶರಣ್‌ ಪಂಪ್ವೆಲ್‌
ಲಾವಣ್ಯ ಹತ್ಯೆ ನಡೆಸಿದ ಚೇತನ್‌ ಪ್ರಕರಣವನ್ನು ಪಾಸ್ಟ್‌ ಟ್ರ್ಯಾಕ್‌ ನ್ಯಾಯಾಲಯದಲ್ಲಿ ತಕ್ಷಣವೇ ವಿಚಾರಣೆ ನಡೆಸಿ ಗಲ್ಲು ಶಿಕ್ಷೆಗೆ ಗುರಿಪಡಿಸಿರಿ, ಆತನನ್ನು ಬಜರಂಗದಳದ ಕಾರ್ಯಕರ್ತ ಅನ್ನುವ ಫೋಟೊವನ್ನು ಸೃಷ್ಟಿಸಿ, ಸಂಘಟನೆಗೆ ಅಪಪ್ರಚಾರ ನಡೆಸುವ ಕಾಂಗ್ರೆಸ್‌ ಮುಖಂಡೆ ಶೈಲಜಾ ಅಮರನಾಥ್‌ ಸೇರಿದಂತೆ ತಮ್ಮದೇ ಪಕ್ಷದ ಕಾರ್ಯಕರ್ತರನ್ನು ತಕ್ಷಣವೇ ಬಂಧಿಸಿ, ಇಲಾಖೆಗೆ ಗೌರವಿಸುತ್ತಾ ಜಿಲ್ಲೆಯಲ್ಲಿ ಶಾಂತಿ ನೆಲೆಯೂರಲು ಪೊಲೀಸರ ಜೊತೆಗೆ ಸಂಘಟನೆ ನಿಂತಿದೆ, ಅದನ್ನು ಪ್ರಚೋದಿಸಿ ಕೋಮು ಸಂಘರ್ಷಣೆಗಳಿಗೆ ದಾರಿ ಮಾಡಿಕೊಡದಿರಿ ಎಂದು ವಿಶ್ವ ಹಿಂದೂ ಪರಿಷತ್‌ ನ ಶರಣ್‌ ಪಂಪ್‌ ವೆಲ್‌ ತಿಳಿಸಿದ್ದಾರೆ.
ಹಿಂದೂ ಯುವತಿಯ ಭೀಕರ ಹತ್ಯೆ ಅತ್ಯಂತ ನೋವಿನ ಹಾಗೂ ಖಂಡನೀಯ ಘಟನೆ. ಹಾಡಹಗಲೇ ತಲವಾರಿನಿಂದ ಯುವತಿಯನ್ನು ಹತ್ಯೆ ಮಾಡಿರುವುದು ಇಡೀ ಕರಾವಳಿ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಹತ್ಯೆ ನಡೆಸಿದ ಆರೋಪಿ ಚೇತನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ಗಲ್ಲು ಶಿಕ್ಷೆಯಾಗುವಂತೆ ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆ ಪರಿಣಾಮಕಾರಿ ತನಿಖೆ ನಡೆಸಬೇಕು . ಪ್ರಕರಣಕ್ಕೆ ಸಾಕಷ್ಟು ಪ್ರತ್ಯಕ್ಷದರ್ಶಿಗಳಿದ್ದು, ಸಾಕ್ಷ್ಯಗಳ ಕೊರತೆಯಿಲ್ಲ. ಆದ್ದರಿಂದ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಶೀಘ್ರ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.


ಬಜರಂಗದಳವು ವಿಶ್ವ ಹಿಂದೂ ಪರಿಷತ್ತಿನ ಯುವ ವಿಭಾಗವಾಗಿದ್ದು, ಯುವಕರಲ್ಲಿ ದೇಶಭಕ್ತಿ ಹಾಗೂ ಸಾಮಾಜಿಕ ಸೇವೆಯ ಮನೋಭಾವ ಬೆಳೆಸುವ ಉದ್ದೇಶದಿಂದ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಇಂತಹ ಸಂಘಟನೆಯ ಹೆಸರಿಗೆ ಧಕ್ಕೆ ತರುವ ಉದ್ದೇಶದಿಂದ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಅದರಲ್ಲೂ ಕೆಲವರು ಬಜರಂಗದಳದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ ಎಂದು ತಿಳಿಸಿದರು.ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಾತ್ಮಕ ಸಂದೇಶಗಳನ್ನು ಹರಡಿ ಕೋಮು ಅಶಾಂತಿ ಸೃಷ್ಟಿಸಲು ಕೆಲ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಇಂತಹವರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಯಾವುದೇ ತಾರತಮ್ಯವಿಲ್ಲದೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಭಾರತವು ತಾಯಂದಿರು ಹಾಗೂ ಮಹಿಳೆಯರಿಗೆ ಗೌರವ ನೀಡುವ ಸಂಸ್ಕೃತಿ ಹೊಂದಿದ ದೇಶವಾಗಿದ್ದು, ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುವ ಇಂತಹ ಅಮಾನವೀಯ ಕೃತ್ಯಗಳಿಗೆ ಸಮಾಜ ಒಗ್ಗಟ್ಟಿನಿಂದ ವಿರೋಧ ವ್ಯಕ್ತಪಡಿಸಬೇಕು. ಸಂಘಪಪರಿವಾರದ ವಿರುದ್ಧ ಅಪಪ್ರಚಾರ ಮುಂದುವರಿಸಿದಲ್ಲಿ ಜಿಲ್ಲೆಯಾದ್ಯಂತ ರಸ್ತೆಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.
ಈ ವೇಳೆ ವಿಹಿಂಪ ಮುಖಂಡ ಪ್ರದೀಪ್‌ ಸರಿಪಲ್ಲ, ಕೋಟೆಕಾರು ಪಟ್ಟಣ ಪಂಚಾಯತ್‌ ಅಧ್ಯಕ್ಷೆ ದಿವ್ಯಾ ಸತೀಶ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೋಹನ್‌ರಾಜ್‌ ಕೆ.ಆರ್‌, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್‌ ಮಲ್ಯ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!