ಬಂಟ್ವಾಳ:ದುರ್ಗಿ ಸೇವಾ ಸಂಘ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಮೋಂತಿಮಾರ್ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿ, ವನಮಹೋತ್ಸವ ಹಾಗೂ ಸಸಿ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಮಂದಿ ಭಾಗವಹಿಸಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇರಿದಂತೆ ವಿವಿಧ ಸೇವಾ ಸೌಲಭ್ಯಗಳನ್ನು ಪಡೆದುಕೊಂಡರು. ಪರಿಸರ ಸಂರಕ್ಷಣೆ ಹಾಗೂ ಜನಹಿತದ ಉದ್ದೇಶದಿಂದ ವನಮಹೋತ್ಸವದ ಅಂಗವಾಗಿ ಸಸಿ ವಿತರಿಸಲಾಯಿತು.

ದುರ್ಗಿ ಸೇವಾ ಸಂಘದ ಅಧ್ಯಕ್ಷೆ ಚಿತ್ರಾ ಎಡಪಡಿತಾಯ, ಕಾರ್ಯದರ್ಶಿ ಜಯಂತಿ ಮುಕುಂದ್ ಪ್ರಭು, ಕೋಶಾಧಿಕಾರಿ ಸುಮಾ ಸುನಿಲ್, ಡೊನಾಲ್ಡ್ ಬಂಟ್ವಾಳ, ಜೊತೆ ಕಾರ್ಯದರ್ಶಿ ದೇವಪ್ಪ ಪೂಜಾರಿ, ಜಗದೀಶ್ ಎಡಪಡಿತಾಯ ಹಾಗೂ ಡಾ. ಮುಕುಂದ ಪ್ರಭು ಉಪಸ್ಥಿತರಿದ್ದರು.

ಜಯಂತಿ ಮುಕುಂದ್ ಪ್ರಭು ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಸಮುದಾಯ ಸೇವೆ, ಪರಿಸರ ಸಂರಕ್ಷಣೆ ಹಾಗೂ ಜನಹಿತದ ಆಶಯದೊಂದಿಗೆ ನಡೆದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಸಂಘಟಕರು ಕೃತಜ್ಞತೆ ಸಲ್ಲಿಸಿದರು.


