ಲಯನ್ಸ ಕ್ಲಬ್ ಕುದ್ರೆಮುಖದ 2026-27ನೇ ಸಾಲಿನ ಲಯನ್ಸ್ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಗಳೂರಿನ ಲಾಲ್ ಬಾಗ್ ನ ಬಳಿ ಇರುವ ಹೋಟೆಲ್ ಫುಡ್ ಲ್ಯಾಂಡ್ ನಲ್ಲಿ ಜರಗಿತು. ಕ್ಲಬ್ಬಿನ ನಿರ್ಗಮಿತ ಅಧ್ಯಕ್ಷ ಲ. ಸುಭಾಷ್ ರಾಥೋಡ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಸಿಕ್ಯುಐನ ಮುಖ್ಯ ಸಂಯೋಜಕರಾದ ಶ್ರೀಮತಿ ಲ. ಉಮಾ ಬಿ ಹೆಗ್ಡೆಯವರು ಪದಗ್ರಹಣ ಅಧಿಕಾರಿಯಾಗಿ ಪ್ರಮಾಣವಚನ ಬೋಧಿಸಿ ನೂತನ ಪದಾದಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ಪತಿ ಲ. ಬಾಲಕೃಷ್ಣ ಹೆಗಡೆಯವರು ಉಪಸ್ಥಿತರಿದ್ದರು.


ಲ.ಡಾಕ್ಟರ್ ಯೋಗೀಶ್ ರವರು ನೂತನ ಪದಾಧಿಕಾರಿಗಳ ಪರಿಚಯವನ್ನು ಮಾಡಿದರು. ಲ. ಸುಧೀರ್ ಕುಮಾರ್ ರವರು ಸಭೆಗೆ ಮುಖ್ಯಅತಿಥಿಯ ಪರಿಚಯವನ್ನು ಮಾಡಿಕೊಟ್ಟರು. 2026-27ನೇ ಸಾಲಿನ ಕ್ಲಬ್ಬಿನ ನೂತನ ಅಧ್ಯಕ್ಷ ಲ. ನಾಗೇಶ್ ಕೆ, ಕಾರ್ಯದರ್ಶಿ ಲ. ಸುಧೀರ್ ಕುಮಾರ್ ಕೆ, ಖಜಾಂಚಿಯಾಗಿ ಲ. ಅಂಜನಪ್ಪನವರು ಅಧಿಕಾರ ಸ್ವೀಕರಿಸಿದರು. ಕ್ಲಬ್ಬಿನ ಸದಸ್ಯರಾದ ಲ. ಭವಾನಿ ಶಂಕರ್ ಶೆಟ್ಟಿ, ಲ. ವಿನಾಯಗಂ, ಲ. ರವೀಂದ್ರ ಬಾಬು, ಲ. ಸಾಗರ್ ನಾಯ್ಕ್ ರವರಿಗೆ ವಿವಿಧ ಹುದ್ದೆಗಳ ಪ್ರಮಾಣವಚನವನ್ನು ಬೋಧಿಸಲಾಯಿತು.


ಐಪಿಡಿಜಿ ಲ.ಕುಡ್ಪಿ ಅರವಿಂದ ಶಣೈ, ಜಿಲ್ಲಾ ಸಂಪುಟ ಕಾರ್ಯದರ್ಶಿ ಲ. ಪ್ರಶಾಂತ್ ಶೆಟ್ಟಿ, ಪ್ರಾಂತ್ಯಾಧ್ಯಕ್ಷ ಲ. ಜಯರಾಜ್ ಪ್ರಕಾಶ್, ವಲಯಾ ಧ್ಯಕ್ಷ ಲ. ರಾಜೇಶ್ ಕಾಮತ್ ಉಪಸ್ಥಿತರಿದ್ದರು. ಪದಗ್ರಹಣಾಧಿಕಾರಿ ಲ.ಉಮಾ ಹೆಗ್ಡೆ ದಂಪತಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಉಪ ಜಿಲ್ಲಾ ರಾಜ್ಯಪಾಲರುಗಳಾದ ಲ. ಗೋವರ್ಧನ ಶೆಟ್ಟಿ ಮತ್ತು ಲ. ವೆಂಕಟೇಶ್ ಹೆಬ್ಬಾರರು ಶುಭ ಹಾರೈಸಿದರು. ಲ. ಬ್ರಹ್ಮಮ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಹಾಗೂ ಕೊನೆಯಲ್ಲಿ ಲ. ಅಂಜನಪ್ಪನವರು ವಂದನಾಪಣೆಯನ್ನು ಅರ್ಪಿಸಿದರು.

