ಕಟೀಲು ಮೇಳದ ವಿರುದ್ಧ ಅಪಪ್ರಚಾರ ಆರೋಪ: ದುರುದ್ದೇಶಿ ಶಕ್ತಿಗಳಿಗೆ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥನೆ

ಮಂಗಳೂರು :ಕಟೀಲು ಮೇಳದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮತ್ತು ಧಾರ್ಮಿಕ ಆಕ್ರಮಣ ನಡೆಯುತ್ತಿದೆ ಎಂದಾರೋಪಿಸಿ ಕಟೀಲು ದೇವಾಲಯದಲ್ಲಿ ಪ್ರಾರ್ಥನೆ ಮಾಡಲಾಯಿತು.

.ಕ್ಷೇತ್ರದ ಪಾವಿತ್ರತೆ ಎತ್ತಿ ಹಿಡಿಯಲು ವಿಶ್ವ ಹಿಂದೂ ಪರಿಷತ್ ನೇತ್ರತ್ವದಲ್ಲಿ ದೇವರ ಭಕ್ತಾದಿಗಳು , ಸನಾತನ ಧರ್ಮ ಪ್ರೇಮಿಗಳು , ಯಕ್ಷಗಾನ ಅಭಿಮಾನಿಗಳು , ಅಸ್ರಣ್ಣ ಜೊತೆ ಸೇರಿ ಕಟೀಲು ಕ್ಷೇತ್ರದಲ್ಲಿ ಅಪಪ್ರಚಾರದ ವಿರುದ್ಧ ಪ್ರಾರ್ಥನೆ ಮಾಡಿದರು.

ಕಟೀಲು ಮೇಳದ ಬಗ್ಗೆ ಹೇಳುತ್ತಿರುವ ಹೇಳಿಕೆ ಆಧಾರರಹಿತವಾಗಿದೆ ದುರುದ್ದೇಶ ಮತ್ತು ಸಮಾಜದಲ್ಲಿ ಗೊಂದಲ ಉಂಟುಮಾಡುವ ದೃಷ್ಟಿಯಿಂದ ಆಗುತ್ತಿದೆ. ಸೌಹಾರ್ದತೆ ,ಭಕ್ತಿ ,ಶ್ರದ್ದೆಯಿಂದ ನಡೆಯುತ್ತಿರುವ ಮೇಳಕ್ಕೆ ಕಳಂಕ ತಂದು ಭಕ್ತರ ನಡುವೆ ವೈಷಮ್ಯ ತರಲು ಹುನ್ನಾರ ನಡೆಯುತ್ತಿದೆ ,ಇಂತಹ ಅಪಪ್ರಚಾರ ಮಾಡುವ ದುಷ್ಟ ಶಕ್ತಿಗಳಿಗೆ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥನೆ ಸಲ್ಲುಸಲಾಯಿತು.

ವಿಶ್ವ ಹಿಂದೂ ಪರಿಷತ್ ಮುಖಂಡ ಶಿವಾನಂದ್ ಮೆಂಡನ್ ಕಟೀಲಿನಲ್ಲಿ ಪ್ರಾರ್ಥನೆಯ ಬಳಿಕ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!