ಪುತ್ತೂರು ದರ್ಬೆಯಲ್ಲಿ ನಡೆದ ಘಟನೆಯಲ್ಲಿ ಪೋಲಿಸರ ಮುಂದೆಯೆ ಹಲ್ಲೆ ಮತ್ತು ಗುಂಪು ಸೇರಿ ಗಲಭೆ ಯತ್ನ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಖಂಡನೆ

ಪುತ್ತೂರು ದರ್ಬೆ ವೃತ್ತದ ಬಳಿಯಿರುವ ಅಂಗಡಿಯಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನಿನ ಮೊರೆ ಹೋಗದೆ ಒಂದು ಮತದ ವ್ಯಕ್ತಿಗಳ ಪರವಾಗಿ ಗುಂಪು ಸೇರಿ ಗಲಭೆಗೆ ಯತ್ನಿಸಿರುವುದಲ್ಲದೇ ಪೋಲಿಸರ ಮುಂದೆಯೆ ಹಲ್ಲೆ ನಡೆಸಿದ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ.

ಅಂಗಡಿಯಲ್ಲಿ ನಡೆದ ವಾಗ್ವಾದ ಮತ್ತು ಹಲ್ಲೆ ವಿಷಯವಾಗಿ ಪೋಲಿಸರಿಗೆ ದೂರು ನೀಡುವ ಬದಲು ಒಂದು ಕೋಮಿನ ವ್ಯಕ್ತಿಗಳು ಗಂಪು ಸೇರಿ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಸುವ ಮೂಲಕ ಕಾನೂನನ್ನು ಕೈಗೆತ್ತಿಕೊಳ್ಳಲು ಮುಂದಾಗಿ ಪೋಲಿಸರ ಮುಂದೆಯೆ ಮಹಿಳೆ ಮತ್ತು ಅಂಗಡಿ ಮಾಲೀಕರ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ.
ಹಾಗೂ ಈ ಘಟನೆಯನ್ನು ಮುಂದಿಟ್ಟು ಸ್ಥಳದಲ್ಲಿ ದಾಂದಲೇ ಎಬ್ಬಿಸಲು ಮುಂದಾದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಆಗ್ರಹಿಸುತ್ತದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!