ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಪ್ರಯುಕ್ತ ಪ್ರಾರ್ಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಮುದ್ದುಕೃಷ್ಣ ಸಂಸ್ಕೃತಿಕ ಟ್ರಸ್ಟ್ (ರಿ) ತೊಕ್ಕೋಟು ಇದರ ವತಿಯಿಂದ ಮೊದಲ ಹಂತದ ಕಾರ್ಯಕ್ರಮಗಳನ್ನು ಕ್ಲಿಕ್ ಸಭಾಂಗಣ ಒಳಪೇಟೆ ತೊಕ್ಕೊಟ್ಟು ಇಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಪುಟಾಣಿಗಳಾದ ಪ್ರಾಧ್ಯಾ ಬಜ್ಪೆ, ಆದಿತ್ಯ ರಾಜ್ ಭಟ್, ತ್ರಿಷಿಕಾ, ಅಭಿಷ್ಟ ಕೃಷ್ಣ, ಅಗಮ್ಯ ಉದ್ಘಾಟನೆ ಮಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿದ್ವಾನ್ ಕೆ.ವಿ ರಮಣಾಚಾರ್ಯರು ಪೂರ್ಣಾವಧಿ ಪ್ರಚಾರಕರು ಕೋಟಿಗೀತ ಲೇಖನ ಯಜ್ಞ ಗೀತ ಮಂದಿರ ಶ್ರೀ ಪುತ್ತಿಗೆ ಮಠ ಉಡುಪಿ ಇವರು ಮೊಸರು ಕುಡಿಕೆ ಉತ್ಸವದ ಉದ್ದೇಶವೇ ತಾಯಿ ಯಶೋದೆ ಮತ್ತು ದೇವಕಿಯ ಮಮತೆಯ ವಿಚಾರಧಾರೆಯಾಗಿದೆ ಅಂತಹ ಅದ್ಭುತವನ್ನು ಮರು ಸೃಷ್ಟಿಸುತ್ತಾ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುವುದಾಗಿದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಚಂದ್ರಕಾಂತ್ ತೊಕ್ಕೋಟು ಉಪಾಧ್ಯಕ್ಷ ಸತೀಶ್ ದೀಪಂ ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ ಕಾರ್ಯಕ್ರಮ ಸಂಯೋಜಕರಾದ ಶ್ರೀ ಚಿರುಂಭ ಭಗವತಿ ಕ್ಷೇತ್ರದ ಉಳ್ಳಾಲ ಇದರ ಗುರಿಕಾರರಾದ ಅಶೋಕ್ ತೊಕ್ಕೋಟು ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ನವನೀತ್ ಕುತ್ತಾರ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.


ಸಮಿತಿಯ ಸದಸ್ಯರಾದ ಪದ್ಮನಾಭ ಪ್ರಾರ್ಥನೆ ಮಾಡಿ ಬಬಿತಾ ಕಾವುರ್ ಸ್ವಾಗತಿಸಿ ಈ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಸುಮಾರು ಇನ್ನೂರ ಮೂವತ್ತಕ್ಕಿಂತ ಹೆಚ್ಚುವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಭಾಷಣ, ಭಕ್ತಿಗೀತೆ, ಭಗವದ್ಗೀತಾ ಕಂಠಪಾಠ, ಚಿತ್ರಕಲೆ, ಶಂಖವಾದನ ಸ್ಪರ್ಧಾ ಕಾರ್ಯಕ್ರಮಗಳು ಜರುಗಿತು ಈ ಕಾರ್ಯಕ್ರಮಕ್ಕೆ ರಾಜಗೋಪಾಲ್ ಪೈವಳ್ಳಿಕೆ, ಪುಷ್ಪ ಮುರಳಿಧರ್ , ಶ್ರೀ ತುಷಾರ್ ಆಚಾರ್ಯ, ಹರಿಣಿ ಉದಯ್, ಕೃತಿ ಕರ್ಕೇರಾ, ರಾಜೇಶ್ ದಡ್ಡಂಗಡಿ, ಕಾರ್ತಿಕ್ ಉಳ್ಳಾಲ್, ಜೆಪಿ ಕೋಟೆಕಾರ್, ಪ್ರಮೋದ್ ಉಳ್ಳಾಲ ಇವರು ತೀರ್ಪುಗಾರರಾಗಿ ಸಹಕರಿಸಿದರು




