ಮಂಗಳೂರು:ಪಿಂಚಣಿ ಮಂಜೂರಾತಿಗೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ ತೋರಲಾಗಿದೆ ಎಂದಾರೋಪಿಸಿ ಮಂಗಳೂರು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ವಿರುದ್ದ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನಲ್ಲಿ ಅನುದಾನಿತ ಹುದ್ದೆಯಲ್ಲಿ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದ ಕಾಂತಪ್ಪ ಅವರ ಮರಣಾನಂತರದ ಕುಟುಂಬ ಪಿಂಚಣಿ ಮತ್ತು ಇತರ ಆರ್ಥಿಕ ಸೌಲಭ್ಯಗಳನ್ನು ಅವರ ಪತ್ನಿಗೆ ನಿರಾಕರಿಸಲಾಗಿತ್ತು.


ಈ ಬಗ್ಗೆ ಮೃತ ಕಾಂತಪ್ಪ ಅವರ ಪತ್ನಿ ಗಿರಿಜಾ ಅವರು ಕಾಲೇಜು ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಗೆ ದೂರು ನೀಡಿದ್ದರು. ಕಾಲೇಜು ಶಿಕ್ಷಣ ಆಯುಕ್ತರ ಕಚೇರಿಯು ೨೦೨೫ರ ನವೆಂಬರ್ ೨೪ ರಂದು ಪ್ರಕರಣವನ್ನು ಪರಿಶೀಲಿಸಿ ಪಿಂಚಣಿ ಪ್ರಸ್ತಾವನೆ ಹಾಗೂ ಸೇವಾ ಪುಸ್ತಕವನ್ನು ಮರು ಟಪ್ಪಾಲಿನಲ್ಲಿ ಸಲ್ಲಿಸುವಂತೆ ಜಂಟಿ ನಿರ್ದೇಶಕರಾದ ಡಾ.ಕವಿತಾ ಅವರಿಗೆ ನಿರ್ದೇಶನ ನೀಡಿತ್ತು.

ಆದರೆ ಮಂಗಳೂರಿನ ಜಂಟಿ ನಿರ್ದೇಶಕರು ಈ ಬಗ್ಗೆ ಕ್ರಮ ವಹಿಸದೆ ನಿರ್ಲಕ್ಷ್ಯ ಮಾಡಿದ್ದರು. ಇದರಿಂದ ನೊಂದ ಗಿರಿಜಾ ಅವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.’

