ಹಿಂದೂ ವಿರೋಧಿ ನೀತಿಯೇ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಮುನ್ನುಡಿ :- ಕಾಮತ್

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಮಿತಿ ಮೀರಿದ್ದು, ಹಿಂದೂಗಳ ಪಾಲಿಗೆ ಅಸಹನೀಯ ವಾತಾವರಣ ಸೃಷ್ಟಿಯಾಗಿದೆ. ಇನ್ನು ಒಂದೂವರೆ ವರ್ಷದಲ್ಲಿ ಇದಕ್ಕೆ ಜನರೇ ಕಡಿವಾಣ ಹಾಕಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜಘಾತುಕ ಶಕ್ತಿಗಳನ್ನು ಓಲೈಸಲು ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹೇರುವುದು, ಪ್ರಕರಣ ನಡೆದು ವರ್ಷಗಳ ನಂತರ ನೋಟಿಸ್‌ ಹೆಸರಲ್ಲಿ ಆರ್‌ಎಸ್‌ಎಸ್‌ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಕಿರುಕುಳ ನೀಡಲು ಯತ್ನಿಸುವುದು, ಪೊಲೀಸರ ಮೂಲಕ ಹಿಂದೂ ಹಬ್ಬಗಳಿಗೆ ಅಡ್ಡಿ ಪಡಿಸುವುದು, ಮೊದಲಾದ ಅಕ್ರಮ ನೀತಿಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಅಂತ್ಯಕ್ಕೆ ತಾನೇ ಮುನ್ನುಡಿ ಬರೆದುಕೊಂಡಿದೆ ಎಂದರು.

ಇದೇ ವೇಳೆ ಚಿಕ್ಕಬಳ್ಳಾಪುರದಲ್ಲಿ ಭಯೋತ್ಪಾದನೆಗೆ ಸಂಚು ರೂಪಿಸಿದ ಆರೋಪದಲ್ಲಿ ಶಂಕಿತ ಉಗ್ರರ ಬಂಧನವಾಗಿದ್ದು, ಅವರ ಟಾರ್ಗೆಟ್ ಬಿಜೆಪಿಯ ನಾಯಕರು ಎನ್ನುವುದು ಆಘಾತಕಾರಿ ಸಂಗತಿ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ ಮತ್ತು ಸಮಾಜಘಾತುಕ ಶಕ್ತಿಗಳ ವಿರುದ್ಧ ಮೃದು ಧೋರಣೆಯೇ ಇಂತಹ ಅಪಾಯಕಾರಿ ಮನಸ್ಥಿತಿ ಬೆಳೆಯಲು ಕಾರಣ. ಉಗ್ರ ಮನಸ್ಥಿತಿಗಳನ್ನು ಮಟ್ಟ ಹಾಕುವ ಬದಲು, ಹಿಂದೂ ಸಮಾಜದ ಧ್ವನಿಯನ್ನೇ ಕುಗ್ಗಿಸಲು ಯತ್ನಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನೀಚ ರಾಜಕಾರಣವನ್ನು ಮುಂದುವರಿಸಿದೆ. ಇದು ಇಡೀ ರಾಜ್ಯ ಸಹಿತ ದೇಶಕ್ಕೆ ಗಂಡಾಂತರ ತೊಂದೊಡ್ಡಲಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!