ಮಂಗಳೂರಲ್ಲಿ ಯು.ಟಿ. ಖಾದರ್ ಜನ್ಮದಿನಾಚರಣೆ, ಕೃತಕ ಕೈಕಾಲು ಜೋಡಣಾ ಶಿಬಿರ, ವಿಕಲಾಂಗ ಸಲಕರಣೆಗಳ ವಿತರಣೆ

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಸಂತ ಅಲೋಷಿಯಸ್ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ ಮಂಗಳೂರು, ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಬೆಂಗಳೂರು, ಯುಟಿಕೆ ಸೋಷಿಯಲ್ ಫಾರಮ್ ಮಂಗಳೂರು ಸಹಯೋಗದೊಂದಿಗೆ ಅನಿವಾಸಿ ಉದ್ಯಮಿಗಳಾದ ಡಾ. ರೊನಾಲ್ಡ್ ಕೊಲಾಸೊ ಹಾಗೂ ಶಮೀರುರ್ರಹ್ಮಾನ್ ಅವರ ಪ್ರಾಯೋಜಕತ್ವದಲ್ಲಿ ಯು.ಟಿ. ಖಾದರ್ ಜನ್ಮದಿನಾಚರಣೆ, ಬೃಹತ್ ಕೈ ಕಾಲು ಜೋಡಣಾ ಶಿಬಿರ ಹಾಗೂ ವಿಕಲಾಂಗ ಸಲಕರಣೆಗಳ ವಿತರಣಾ ಸಮಾರಂಭವು ಅಕ್ಟೋಬರ್ 12 ಮತ್ತು 13 ರಂದು ಬೆಳಗ್ಗೆ 8 ರಿಂದ ಸಂಜೆ 05 ರ ತನಕ ಕೊಡಿಯಾಲ್ ಬೈಲ್ ಅಲೋಷಿಯಸ್ ಪದವಿಪೂರ್ವ ಕಾಲೇಜು ಕ್ಯಾಂಪಸಿನ ಲೊಯೋಲಾ ಹಾಲ್ ನಲ್ಲಿ ನಡೆಯಲಿದೆ.

ಅಕ್ಟೋಬರ್ 12 ಸೋಮವಾರದಂದು ಬೆಳಗ್ಗೆ 09.30ಕ್ಕೆ ಆರೋಗ್ಯ, ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಸಚಿವರಾದ ಯು.ಟಿ. ಖಾದರ್ ಉದ್ಘಾಟಿಸುವರು. ಎಂ.ಫ್ರೆಂಡ್ಸ್ ಚೆಯರ್ಮೆನ್ ಝಕರಿಯಾ ಜೋಕಟ್ಟೆ ಅಧ್ಯಕ್ಷತೆ ವಹಿಸಲಿದ್ದು, ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ ಸಲಕರಣೆ ವಿತರಿಸುವರು. ಸಂತ ಅಲೋಷಿಯಸ್ ವಿಶ್ವವಿದ್ಯಾಲಯದ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ., ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ವೈಟ್ ಸ್ಟೋನ್ ಗ್ರೂಪ್ ಮುಖ್ಯಸ್ಥ ಬಿ.ಎಂ. ಶರೀಫ್ ಬೋಳಾರ್, ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಮುಖ್ಯಸ್ಥ ಎಫ್. ಆರ್. ಸಿಂಘ್ವಿ, ಯುಎಇ ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರ್, ಸಂತ ಅಲೋಷಿಯಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ವಿನುತಾ ಡಿ’ಸೋಜಾ, ಉದ್ಯಮಿ ಬಿ. ಮಹಮ್ಮದ್ ಹಾಜಿ ಅಮ್ಮುಂಜೆ, ಲೈಫ್ ಲೈನ್ ಹೆಲ್ತ್ ಕೇರ್ ಮುಖ್ಯಸ್ಥ ಡಾ. ಮಹಮ್ಮದ್ ಮುಬಶ್ಶಿರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಫೀಕ್ ಮಾಸ್ಟರ್ ಅವರ ಪ್ರೇರಣಾ ತರಗತಿ ನಡೆಯಲಿದೆ.

ಈಗಾಗಲೇ ನೋಂದಾವಣೆ ಮಾಡಿರುವ 110 ಮಂದಿ ವಿಕಲಾಂಗರಿಗೆ ಕೃತಕ ಕೈಕಾಲನ್ನು ಅಳತೆ ತೆಗೆದು ಅದೇ ದಿನ ತಯಾರಿಸಿ ಉಚಿತವಾಗಿ ವಿತರಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಆಹ್ವಾನಿತ ಅಶಕ್ತರಿಗೆ ಗಾಲಿಕುರ್ಚಿ, ಕ್ಯಾಲಿಪರ್, ವಾಕರ್ ಹಾಗೂ ಸ್ಟಿಕ್ ವಿತರಿಸಲಾಗುವುದು. ಎರಡು ದಿನದಲ್ಲಿ ಕರ್ನಾಟಕ, ಕೇರಳದ ನಾನಾ ಭಾಗಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ ಎಂದು ಶಿಬಿರದ ಸಂಯೋಜಕ ರಶೀದ್ ವಿಟ್ಲ ತಿಳಿಸಿದ್ದಾರೆ.

SHARE
Loading spinner

2 thoughts on “ಮಂಗಳೂರಲ್ಲಿ ಯು.ಟಿ. ಖಾದರ್ ಜನ್ಮದಿನಾಚರಣೆ, ಕೃತಕ ಕೈಕಾಲು ಜೋಡಣಾ ಶಿಬಿರ, ವಿಕಲಾಂಗ ಸಲಕರಣೆಗಳ ವಿತರಣೆ”

  1. Honestly, I’ve tried a few sites but this one is way smoother. The payouts are fast and the interface is just clean. Definitely sticking with vnr888 for my daily gaming.

    Loading spinner

Leave a Reply

Your email address will not be published. Required fields are marked *

error: Content is protected !!