
ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಟ್ಟು , ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ SIR ಪ್ರಕ್ರಿಯೆಯಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ FIR ದಾಖಲಿಸಿ ಕೈ ಸರ್ಕಾರ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಆತಂಕಕಾರಿ ಬೆಳವಣಿಗೆ ಕುರಿತು ಬಿಜೆಪಿ ದಕ್ಷಿಣ ಕನ್ನಡ ಕಾನೂನು ಪ್ರಕೋಷ್ಠದಿಂದ ಇಂದು ಅಂತಹ FIR ದಾಖಲಾದ ಕಾವೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು
ಹಾಗೂ ಎಸ್.ಐ.ಆರ್ ಎಂಬುದು ಒಂದು ಕಡ್ಡಾಯ ಚುನಾವಣಾ ಸಂಬಂಧಿತ ಪ್ರಕ್ರಿಯೆ ಹಾಗೂ ನಮೂನೆ-7 ರ ಅನ್ವಯ ಸಲ್ಲಿಕೆಯಾದ ಅರ್ಜಿಗಳು ಚುನಾವಣಾ ಅಧಿಕಾರಿಗಳು ತಮ್ಮ ಪ್ರಕ್ರಿಯೆಗಳ ಮೂಲಕ ವಿಲೇವಾರಿ ಮಾಡಲು ಸಕ್ಷಮರಿರುತ್ತಾರೆ ಎಂದು ಚರ್ಚಿಸಲಾಯಿತು.

ಇಂತಹ ಅಧಿಕಾರ ದುರುಪಯೋಗದ ಕ್ರಮಗಳ ವಿರುದ್ಧ ನಮ್ಮ ಪಕ್ಷದ ಕಾರ್ಯಕರ್ತರಿಗೆ ತೊಂದರೆಯಾಗದಂತೆ, ಬಿಜೆಪಿ ಕಾನೂನಾತ್ಮಕ ಹೋರಾಟ ನಡೆಸುತದೆ ಎಂದು ಕಾನೂನು ಪ್ರಕೋಷ್ಠದ ಸಂಚಾಲಕರು ತಿಳಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಲೀಗಲ್ ಸೆಲ್ನ ಸಂಚಾಲಕರಾದ ಶ್ರೀಧರ ಶೆಟ್ಟಿ ಪುಳಿಂಚ, ಸಹ ಸಂಚಾಲಕರಾದ ಪ್ರಮೋದ್ ಪೂಜಾರಿ ಕೆರ್ವಾಸೆ, ಜಿಲ್ಲಾ ಲೀಗಲ್ ಸೆಲ್ನ ಸದಸ್ಯರಾದ ಶ್ರೀ ವೇಣುಕುಮಾರ್, ಮೂಡಬಿದ್ರೆ ಮಂಡಲದ ಸಹ ಸಂಚಾಲಕರಾದ ಶಶಿಕುಮಾರ್ ಮೂಲ್ಕಿ, ಸಮಿತಿ ಸದಸ್ಯರಾದ ರವೀಶ್ ಕಾಮತ್, ಮಂಗಳೂರು ಉತ್ತರ ಮಂಡಲದ ಸಮಿತಿ ಸದಸ್ಯರಾದ ಶ್ರೀ ರಾಘವೇಂದ್ರ ಟಿ.ಎನ್, ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಖೋತ್ಸವ ಸಂಚಾಲಕರಾದ ಹಾಗೂ ವಕೀಲರಾದ ಅಕ್ಷಯ್ ಆಳ್ವ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ . ಆರ್, ಮಂಗಳೂರು ಉತ್ತರಮಂಡಲ ಪ್ರಧಾನ ಕಾರ್ಯದರ್ಶಿ ರಣದೀಪ್ ಕಾಂಚನ್, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಶಾನವಾಝ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಬಿಜೆಪಿ ಕಾರ್ಯಕರ್ತರು ಅಥವಾ ಬಿಎಲ್ಒ-2 ಆಗಿ ಎಸ್ ಐ ಆರ್ ಕಾರ್ಯದಲ್ಲಿ ಸಹಕರಿಸಿದವರು ಮುಂದಿನ ದಿನಗಳಲ್ಲಿ ಕಾಂಗ್ರೇಸ್ಸಿನ ಯಾವುದೇ ರೀತಿಯ ಬೆದರಿಕೆ ಅಥವಾ ಒತ್ತಡಕ್ಕೆ ಹೆದರುವ ಅಗತ್ಯವಿಲ್ಲ. ನಿಮ್ಮೊಂದಿಗೆ ಜಿಲ್ಲಾ ಬಿಜೆಪಿ ಲೀಗಲ್ ಸೆಲ್ನ ಜಿಲ್ಲಾ ಹಾಗೂ ಎಲ್ಲಾ ಮಂಡಲಗಳ ತಂಡ ಸದಾ ಬೆನ್ನೆಲುಬಾಗಿ ನಿಲ್ಲಲಿದೆ.
ಮಾತ್ರವಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ, ಯಾವುದೇ ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕಾನೂನುಬದ್ಧವಾಗಿ ರಕ್ಷಣೆ ಹಾಗೂ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಬಿಜೆಪಿ ಲೀಗಲ್ ಸೆಲ್ ಪ್ರಕಟನೆಯಲ್ಲಿ ತಿಳಿಸಿದೆ


