ಮಂಗಳೂರು / ಬಂಟ್ವಾಳ:
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬನ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ, ಯುವಕ ನಿರ್ದೋಷಿ ಎಂದು ಮಾನ್ಯ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ :
ದಿನಾಂಕ 12.10.2020 ರಂದು ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿಯ ಯುವತಿಯೊಬ್ಬಳು, ಬಂಟ್ವಾಳ ತಾಲೂಕಿನ ಟಿಪ್ಪು ನಗರದ ನಿವಾಸಿ ಅಬ್ದುಲ್ ರಜಾಕ್ ಅವರ ಪುತ್ರ ಅಬ್ದುಲ್ ನಾಸಿರ್ ಎಂಬ ಯುವಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ್ದಾನೆ ಎಂಬುದು ದೂರಿನ ಆರೋಪವಾಗಿತ್ತು.
ವಿಶೇಷವೆಂದರೆ, ಅಬ್ದುಲ್ ನಾಸಿರ್ ಅವರ ಮದುವೆಯ ದಿನದಂದೇ ಈ ದೂರು ದಾಖಲಾಗಿದ್ದು, ಇದರಿಂದಾಗಿ ಅವರ ಮದುವೆಯು ವಿಚ್ಛೇದನದಲ್ಲಿ ಮುಕ್ತಾಯಗೊಂಡಿತ್ತು. ಆದರೆ, “ನನ್ನ ವಿರುದ್ಧ ದ್ವೇಷದಿಂದ ಮತ್ತು ಉದ್ದೇಶಪೂರ್ವಕವಾಗಿ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ಅಬ್ದುಲ್ ನಾಸಿರ್ ಮೊದಲಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದರು.

ನ್ಯಾಯಾಲಯದ ವಿಚಾರಣೆ ಹಾಗೂ ತೀರ್ಪು:
ಈ ಪ್ರಕರಣವು ವಿಚಾರಣೆಗಾಗಿ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಬಂದಾಗ, ಅಭಿಯೋಜನೆಯ (Prosecution) ಪರವಾಗಿ ಸುಮಾರು 11 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಯಿತು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮಾನ್ಯ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಾಮಟೆ ಅವರು, “ಯುವತಿಯು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಹಾಗೂ ಅಭಿಯೋಜನೆ ಪರ ಸಾಕ್ಷಿಗಳು ಆರೋಪವನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ” ಎಂದು ಸ್ಪಷ್ಟಪಡಿಸಿ, ಆರೋಪಿ ಅಬ್ದುಲ್ ನಾಸಿರ್ ಅವರನ್ನು ಆರೋಪಮುಕ್ತಗೊಳಿಸಿ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
ವಕೀಲರ ವಾದ:
ಆರೋಪಮುಕ್ತಗೊಂಡ ಯುವಕ ಅಬ್ದುಲ್ ನಾಸಿರ್ ಅವರ ಪರವಾಗಿ ‘ಲೆಕ್ಸ್ ಜೂರಿಸ್ ಲಾ ಚೇಂಬರ್’ನ (Lex Juris Law Chamber) ಪ್ರಮುಖ ವಕೀಲರಾದ ಆಸಿಫ್ ಬೈಕಾಡಿ, ಮಹಮ್ಮದ್ ಅಸ್ಗರ್ ಮುಡಿಪು, ಇರ್ಷಾದ್ ಸಖಾಫಿ ಮತ್ತು ಅಮ್ಸೀನ ಅವರು ನ್ಯಾಯಾಲಯದಲ್ಲಿ ಸಫಲವಾಗಿ ವಾದ ಮಂಡಿಸಿದ್ದರು.


Had a lucky streak here last night! The system is transparent and the wins feel legit. Can’t wait to go back to pk999win