ಕಾಸರಗೋಡು/ ತ್ರಿಶೂರ್ : ತೃಶೂರ್ ಜಿಲ್ಲೆಯ ತೇಕಿನಿಯಡ್ಕದಲ್ಲಿ ಗುರುವಾರ ಮುಂಜಾನೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭೀಕರ ಕೊಲೆ ನಡೆದಿದೆ. ವಿಜೇಶ್ (35) ಎಂಬಾತ ತನ್ನ ಪತ್ನಿ ವಿಸ್ಮಯ ( 30) ಹಾಗೂ ನಾಲ್ಕು ವರ್ಷದ ಮಗ ದಕ್ಷಿತ್ನ ಕುತ್ತಿಗೆ ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಮನೆಯಲ್ಲಿ ವಿಸ್ಮಯಳ ಕಿರುಚಾಟ ಕೇಳಿ ಸಹೋದರ ಓಡಿ ಬಂದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.
ಬಳಿಕ ಮಗನನ್ನು ಇನ್ನೊಂದು ಕೊಠಡಿಗೆ ಒಯ್ದು ಕೊಂದ ವಿಜೇಶ್, ತಾನೂ ಕುತ್ತಿಗೆ ಸೀಳೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿರುವ ಆತನನ್ನು ತೃಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

