ಕಣ್ಣೂರು ಶ್ರೀ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಸುಧೀರ್ ಶೆಟ್ಟಿ ಆಯ್ಕೆ-50ನೇ ವರ್ಷದ ಗಣೇಶೋತ್ಸವದ ಅಂಗವಾಗಿ ವರ್ಷವಿಡೀ ಸಾಮಾಜಿಕ, ಧಾರ್ಮಿಕ ಹಾಗೂ ಆರೋಗ್ಯ ಕಾರ್ಯಕ್ರಮಗಳ ಆಯೋಜನೆಗೆ ಯೋಜನೆ

ಮಂಗಳೂರು: ಕಣ್ಣೂರು ಶ್ರೀ ಗಣೇಶೋತ್ಸವ ಸಮಿತಿ (ರಿ.) ವತಿಯಿಂದ 2025–26ನೇ ಸಾಲಿನ ಲೆಕ್ಕಪತ್ರ ಮಂಡನೆ ಹಾಗೂ ವಾರ್ಷಿಕ ಸಭೆ ಅಕ್ಟೋಬರ್ 25ರಂದು ಭಾನುವಾರ ನಡೆಯಿತು. ಸಭೆಯಲ್ಲಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಸುಧೀರ್ ಶೆಟ್ಟಿ ಕಣ್ಣೂರು ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಅಧ್ಯಕ್ಷ ನಿತಿನ್ ಕಣ್ಣೂರು ಅವರು 48ನೇ ವರ್ಷದ ಗಣೇಶೋತ್ಸವ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ನೂತನ ಸಮಿತಿ ರಚನೆಗೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ನೂತನ ಸಮಿತಿ ರಚನೆಯ ಪ್ರಕ್ರಿಯೆಗೆ ಮೋನಪ್ಪ ಬಿ. ಅವರು ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ನೂತನ ಸಮಿತಿಯ ಪದಾಧಿಕಾರಿಗಳು:

ಗೌರವಾಧ್ಯಕ್ಷರು: ರಾಮಚಂದ್ರ ಕಣ್ಣೂರು

ಅಧ್ಯಕ್ಷರು: ಸುಧೀರ್ ಶೆಟ್ಟಿ ಕಣ್ಣೂರು

ಉಪಾಧ್ಯಕ್ಷರು: ಯುವರಾಜ್ ಸುವರ್ಣ, ಸುರೇಶ್ ಪೂಜಾರಿ ಕಣ್ಣೂರು

ಪ್ರಧಾನ ಕಾರ್ಯದರ್ಶಿ: ನಿತಿನ್ ಕಣ್ಣೂರು

ಜೊತೆ ಕಾರ್ಯದರ್ಶಿಗಳು: ದೀಪಕ್ ಅಮೀನ್, ಅಮನ್ ಅಂಚನ್

ಸಂಘಟನಾ ಕಾರ್ಯದರ್ಶಿಗಳು: ಸುಧಾಕರ ಆಚಾರ್ಯ, ನಾಗೇಶ್ ಕೋಟ್ಯಾನ್

ಕ್ರೀಡಾ ಕಾರ್ಯದರ್ಶಿಗಳು: ಶ್ರೇಯಸ್ ಅಂಚನ್, ರಾಜೇಶ್ ಕೋಟ್ಯಾನ್

ಮಾಧ್ಯಮ ಸಂಚಾಲಕರು: ಸಚಿನ್ ಶೆಟ್ಟಿ, ಅರ್ಪಿತ್ ಶೆಟ್ಟಿ

ನೂತನ ಅಧ್ಯಕ್ಷ ಸುಧೀರ್ ಶೆಟ್ಟಿ ಕಣ್ಣೂರು ಅವರು ಮಾತನಾಡಿ, ನೂತನ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಮಿತಿಯ 50ನೇ ವರ್ಷದ ಗಣೇಶೋತ್ಸವದವರೆಗೆ ಪ್ರತಿ ತಿಂಗಳು ಸಾಮಾಜಿಕ, ಧಾರ್ಮಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು ರೂಪಿಸುವ ಪ್ರಸ್ತಾವನೆಯನ್ನು ಮುಂದಿಟ್ಟರು.

ಸಮಿತಿಯ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿ, ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನರಿಗೆ ಹೆಚ್ಚಿನ ಸೇವೆ ಒದಗಿಸುವ ಉದ್ದೇಶವನ್ನು ನೂತನ ಸಮಿತಿ ಹೊಂದಿದೆ.

ಕಾರ್ಯಕ್ರಮವನ್ನು ನಿಖಿತ್ ಕೊಟ್ಟಾರಿ ಕಣ್ಣೂರು ನಿರೂಪಿಸಿ, ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!