ಪುತ್ತೂರು ರೇಂಜ್ ಮುಸಾಬಖ, ಪಡೀಲ್ ಮದ್ರಸ ರನ್ನರ್ ಅಪ್

ಪುತ್ತೂರು : SKJM ಪುತ್ತೂರು ರೇಂಜ್ ಆಶ್ರಯದಲ್ಲಿ ಕೋಡಿಂಬಾಡಿ ಮದ್ರಸ ವಠಾರದಲ್ಲಿ ನಡೆದ ಮದ್ರಸ ವಿದ್ಯಾರ್ಥಿಗಳ “ಮುಸಾಬಖ” ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಪಡೀಲ್ ಮುಈನುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ರೇಂಜಿನಲ್ಲಿ ಮಗದೊಮ್ಮೆ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.

ಅಲುಮ್ನಿ, ಜೂನಿಯರ್, ಜನರಲ್ ವಿಭಾಗಗಳಲ್ಲಿ ವಿಭಾಗೀಯ ಚಾಂಪಿಯನ್ ಪಡೆದಾಗ ಕಿಡ್ಡೀಸ್ ವಿಭಾಗದ ಮುಹಮ್ಮದ್ ನಝ್ಹಾನ್ ಅಮೀನ್ ಹಾಗೂ ಮುಅಲ್ಲಿಂ ವಿಭಾಗದಲ್ಲಿ ಅಶ್ರಫ್ ರಹ್ಮಾನಿ ವ್ಯಕ್ತಿಗತ ಚಾಂಪಿಯನ್ ತನ್ನದಾಗಿಸಿಕೊಂಡರು.

ಅಲುಮ್ನಿ ವಿಭಾಗದ ತಮೀಂ, ಫರ್ವೀಝ್, ಸೀನಿಯರ್ ವಿಭಾಗದ ಮಾಹಿರ್, ಸೀನಿಯರ್ ವಿದ್ಯಾರ್ಥಿನಿಯರ ವಿಭಾಗದ ಅಶ್ಫಿಯಾ, ಜೂನಿಯರ್ ವಿಭಾಗದ ಶಾಮಿಲ್, ಅರ್ಹಾನ್, ಸಲೀತ್, ಕಿಡ್ಡೀಸ್ ವಿಭಾಗದ ನಝ್ಹಾನ್ ಅಮೀನ್, ಜೂನಿಯರ್ ಸಮೂಹ ಹಾಡು ತಂಡ, ಜನರಲ್ ವಿಭಾಗದ ಮೌಲಿದ್ ಮತ್ತು ಅರಬಿ ಸಮೂಹ ಹಾಡು ತಂಡಗಳು ತಮ್ಮ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದರು. ಇನ್ನಿತರ ಕಾರ್ಯಕ್ರಮಗಳು ತುಂಬ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!