ಆರೋಗ್ಯ ಕ್ಷೇತ್ರಕ್ಕೆ ಅಮ್ಮನವರ ಸೇವೆ ಮಹತ್ತರ – ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್.

ಮಂಗಳೂರು: ಆಧುನಿಕ ಭಾರತದ ಅಭಿವೃದ್ಧಿಯ ಕಲ್ಪನೆಯಲ್ಲಿ ಆರೋಗ್ಯ ರಕ್ಷಣೆಯು ಪ್ರಮುಖ ಪಾತ್ರವಹಿಸಿದ್ದು ಈ ಕ್ಷೇತ್ರಕ್ಕೆ ಮಾತಾ ಅಮೃತಾನಂದಮಯಿ ದೇವಿಯವರ ಕೊಡುಗೆ ಅಪಾರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.

.ಅವರು ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಅಮ್ಮನವರ 72 ನೆಯ ಜನ್ಮ ದಿನಾಚರಣೆಯ ಪ್ರಯುಕ್ತ ಜರುಗಿದ ಅಮೃತೋತ್ಸವ 2025 ನ್ನು ಉದ್ಘಾಟಿಸಿ ಮಾತನಾಡಿ, ಮಠದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಬೃಹತ್ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ 100 ಉಚಿತ ಹೃದಯ ಶಸ್ತ್ರ ಚಿಕಿತ್ಸೆ ಪಡೆದವರಲ್ಲಿ ಸಾಂಕೇತಿಕವಾಗಿ 5 ಫಲಾನುಭವಿಗಳಿಗೆ ಆಯುಷ್ ಕಿಟ್ ವಿತರಿಸಿದರು.ಇನ್ನುಳಿದ ಸುಮಾರು 100 ಉಚಿತ ಶಸ್ತ್ರ ಚಿಕಿತ್ಸೆಗೆ ಒಳಪಡುವವರಿಗೆ ಶುಭ ಹಾರೈಸಿ ಚಾಲನೆ ನೀಡಿದರು.ಬಳಿಕ ಅಮೃತ ವಿದ್ಯಾಲಯಂ ನ ಸುಸಜ್ಜಿತ ಗ್ರಂಥಾಲಯವನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮಠದ ಸಮಾಜಮುಖಿ ಸೇವಾ ಕಾರ್ಯಗಳಲ್ಲೊಂದಾದ ಅರ್ಹ ಮಹಿಳೆಯರಿಗೆ ಸೀರೆ ವಿತರಿಸುವ ಮೂಲಕ ವಸ್ತ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಕಾರ್ಯಕ್ರಮದಲ್ಲಿ ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಸಂಪೂಜ್ಯಾ ಸ್ವಾಮಿನಿ ಮಂಗಳಮಾರ್ತಾ ಪ್ರಾಣ , ಅಮೃತ ವಿಶ್ವವಿದ್ಯಾ ಪೀಠಂ ಕೊಚ್ಚಿ ಇದರ ಡೀನ್ ಮತ್ತು ಡೈರೆಕ್ಟರ್ ರಾದ ಡಾ.ಯು.ಕೃಷ್ಣಕುಮಾರ್ , ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ , ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಅಮೀನ್ , ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಡಾ ವಸಂತ ಕುಮಾರ್ ಪೆರ್ಲ , ಡಾ ದೇವದಾಸ್ ಪುತ್ರನ್ ಮುಂತಾದವರು ಉಪಸ್ಥಿತತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!