ಮಂಗಳೂರು: ನಮ್ಮ ಹೆಚ್ಚಿನ ಯವ್ವನವನ್ನು ಗಡಿಯಲ್ಲೇ ಕಳೆಯುತ್ತೇವೆ ಅಲ್ಲಿಂದ ನಿವೃತ್ತಿ ಪಡೆದು ಇಲ್ಲಿಗೆ ಬರುವಾಗ ಯಾವುದೇ ರೀತಿಯ ಮರ್ಯಾದೆ ಸಿಗುವುದಿಲ್ಲ . ಇದು ತುಂಬಾನೇ ನೋವು ಉಂಟು ಮಾಡುತ್ತದೆ . ಸರಕಾರವು ಯಾವುದೇ ಸವಲತ್ತನ್ನು ನೀಡುವುದಿಲ್ಲ ಎಂದು
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕಡಬ ತಾಲ್ಲೂಕು ಘಟಕದ ಅಧ್ಯಕ್ಷರು ,ಮಾಜಿ ಸೈನಿಕರಾದ ಸೆಬಾಸ್ಟೀನ್ ತಮ್ಮ ಅಳಲನ್ನು ತೋಡಿಕೊಂಡರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸಂವಿಧಾನ ಹೇಳುತ್ತದೆ ಸೈನಿಕರಿಗೆ ಗೌರವ, ಅನುಕೂಲವನ್ನು ನೀಡಬೇಕೆಂದು . ಆದರೆ ವಾಸ್ತವ ವಿಷಯಕ್ಕೆ ಬಂದರೆ ನಮಗೆ ಇಲ್ಲಿ ಯಾವುದೇ ಅನುಕೂಲಗಳು ಸಿಗುತ್ತಿಲ್ಲ .ಇಲ್ಲಿ ಆಫೀಸರ್ ರಾಂಕ್ ಮತ್ತು ಜೆ ಸಿ ಓ ರಾಂಕ್ ಹೊಂದಿದವರ ನಡುವೆ ಬಹಳ ತಾರತಮ್ಯವಿದೆ . ವಿದೇಶಗಳಲ್ಲಿ ಸೈನಿಕರಿಗೆ ಒಳ್ಳೆಯ ಗೌರವಿದೆ ಆದರೆ ಇಲ್ಲಿ ಆ ರೀತಿಯ ಭಾವನೆ ಇಲ್ಲ . ನಮಗೆ ಗೌರವ , ಕಾನೂನಾತ್ಮಕ ಸವಲತ್ತು ಸಿಗಬೇಕೆಂದು ಆಗ್ರಹಿಸಿದರು .
ಸರಕಾರ ಈ ಮೊದಲು ಸೈನಿಕರಿಗೆ ಭೂಮಿಯನ್ನು ನೀಡುತ್ತಿತ್ತು ಆದರೆ ಆ ಪದ್ಧತಿ ಈಗ ಇಲ್ಲ . ಸರಕಾರದಲ್ಲಿ ಸ್ಥಳ ಇಲ್ಲದೇ ಇರಬಹುದು ಆದ್ರೆ ನಿವೇಶಗಳನ್ನು ಕಟ್ಟಿ ಕೊಡಬಹುದು ಅಲ್ಲವೇ . ತನ್ನ ಸಂಸಾರದ ಜೊತೆಗೂಡಿ ಕಳೆಯುವ ಉತ್ತಮ ಸಮಯವನ್ನು ಸಂಬಂಧಗಳ ಬಿಟ್ಟು ಗಡಿಯಲ್ಲಿ ಕಳೆದಿರುತ್ತಾರೆ . ಆದರೆ ಅಂಥವರು ಕೆಲಸದಿಂದ ನಿವೃತ್ತಿಹೊಂದಿ ತನ್ನೂರಿಗೆ ಬಂದಾಗ ನಿವೇಶವನ್ನೇ ಕಟ್ಟಿ ಕೊಡುವುದಿಲ್ಲ . ಈ ರೀತಿಯ ಸೌಲಭ್ಯವನ್ನು ಸರಕಾರ ನೀಡುವುದಿಲ್ಲ . ಇದರಲ್ಲಿಯೇ ಸರಕಾರ ಎಷ್ಟು ಹಿಂದೆ ಹೋಗಿದೆ ಎಂಬುದನ್ನು ಗೋಚರಿಸುತ್ತದೆ ಎಂದರು .
ರಾಜಕೀಯ ವ್ಯಕ್ತಿಗಳು ಮಂತ್ರಿಯಾದರೆ , ಎಂ ಎಲ್ ಎ ಆದರೆ ಅವರಿಗೆ ಎಷ್ಟೋ ವರ್ಷ ಪಿಂಚಣಿ ದೊರೆಯುತ್ತದೆ , ಅವರಿಗೆ ಮೀಸಲಾತಿ ಸೌಲಭ್ಯ ಸಿಗುತ್ತದೆ . ಸುಳ್ಳು ಹೇಳಿ – ಹಣ ಹಂಚಿ- ಜಾತಿ ಜಾತಿಗಳ ನಡುವೆ ಹೊಡೆದಾಡುವಂತೆ ಮಾಡಿ ರಾಜಕೀಯದಲ್ಲಿ ಬಂದವರಿಗೆ ಸೌಲಭ್ಯವಿದೆ. ಆದರೆ ನಮ್ಮ ದೇಶಕ್ಕಾಗಿ ಹೋರಾಟ ನಡೆಸುವ ಸೈನಿಕರಿಗೆ ಯಾವುದೇ ಸೌಲಭ್ಯ ಸಿಗದಿರುವುದು ದುರಂತ . ಈ ಸೌಲಭ್ಯಕ್ಕಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ನಿರಂತರ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು .