ಕುಂಬಳೆ : ನವರಾತ್ರಿ ಉತ್ಸವದ ಅಂಗವಾಗಿ ಮುಂಡಪಳ್ಳ ನಾಯ್ಕಾಪುವಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 14ರಂದು ಖ್ಯಾತ ಗಾಯಕಿ ಶ್ರೀಮತಿ ಶ್ರುತಿ ಎನ್. ಆರ್. ಅವರಿಂದ ಸಂಗೀತ ಕಚೇರಿ ನಡೆಯಿತು.

ಸಂಗೀತ ಕಚೇರಿಗೆ ವಯಲಿನ್ನಲ್ಲಿ ಶ್ರೀ ವರದ ಪಟ್ಟಾಜೆ ಹಾಗೂ ಮೃದಂಗದಲ್ಲಿ ಶ್ರೀ ವಿಶ್ವಾಸ್ ಪದ್ಯಾಣ ಅವರು ಸಹಕರಿಸಿದರು. ಭಕ್ತಿಭಾವ ಮತ್ತು ಸಂಗೀತದ ಸೊಗಡಿನಿಂದ ಕೂಡಿದ ಕಾರ್ಯಕ್ರಮವು ನವರಾತ್ರಿ ಉತ್ಸವದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು.




