ಮಂಜೇಶ್ವರ:ಮಲಯಾಳಂ ಕಡ್ಡಾಯ ಭಾಷಾ ಮಸೂದೆ ಜಾರಿ ಮಾಡಲು ಹೊರಟಿರುವ ಎಡರಂಗ ಸರಕಾರದ ನೀತಿ ಭಾಷಾ ಅಲ್ಪಸಂಖ್ಯಾಕರ ಮೇಲಿನ ದಬ್ಬಾಳಿಕೆ ಮಾತ್ರವಲ್ಲ ಗಡಿನಾಡು ಭಾಷಾ ಅಲ್ಪಸಂಖ್ಯಾಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯು ಆಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.ಮಲಯಾಳಂ ಕಡ್ಡಾಯ ಮಸೂದೆ ಚರ್ಚೆ ದಿನ ಅಧಿವೇಶನದಲ್ಲಿ ಭಾಗವಹಿಸದ ಮಂಜೇಶ್ವರ ಶಾಸಕರ ನಡೆ ಬೇಜವಾಬ್ದಾರಿತನದ ಪರಮಾವಾದಿ ಇದು ಖಂಡನಿಯ..ಮಾತ್ರವಲ್ಲ ಕನ್ನಡ ವಿರೋಧಿ ನೀತಿ ಕೂಡ ಆಗಿದೆ ಎಂದು ಆದರ್ಶ ಬಿ ಎಂ ಶಾಸಕರ ನಡೆಯನ್ನು ತೀವ್ರ ವಾಗಿ ಖಂಡಿಸಿದರು.
ಮಂಜೇಶ್ವರ ಶಾಸಕರು ಅನಗತ್ಯ ವಿಚಾರಗಳ ಬಗ್ಗೆ ಮಾತ್ರ ಅಧಿವೇಶನಗಳಲ್ಲಿ ಮಾತನಾಡುತ್ತಾರೆ rss ಗೆ ಬೈಯಲು ಇದ್ರೆ ಗಂಟೆ ಗಟ್ಟಲೆ ಮಾತನಾಡುವ ಮಂಜೇಶ್ವರ ಶಾಸಕರು ಕಡ್ಡಾಯ ಮಲಯಾಳ ಮಸೂದೆ ಚರ್ಚಿಸದೆ ಮಾಡಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಸತ್ಯ ವಿಚಾರ ಅಂದರೆ ಮಸೂದೆ ಜಾರಿ ಆಗುವ ಅಧಿವೇಶನದಲ್ಲಿ ಮಂಜೇಶ್ವರ ಶಾಸಕರು ಬಾಗಿಯೇ ಆಗದೆ ಗೈರು ಆಗಿದ್ದರು ಎಂದು ಆದರ್ಶ ಬಿ ಎಂ ಗಂಭೀರ ಆರೋಪ ಮಾಡಿದರು. ಕನ್ನಡಿಗರ ಪರವಾಗಿ ಕನ್ನಡಿಗರ ಹಕ್ಕುಗಳಿಗಾಗಿ ಸ್ಪಂದಿಸದ ಶಾಸಕರು ಮಂಜೇಶ್ವರಕ್ಕೆ ಅಗತ್ಯವಿಲ್ಲ.
ಅಧಿವೇಶನ ದಲ್ಲಿ ಭಾಗವಹಿಸದೆ ಈಗ ಸಾಮಾಜಿಕ ಜಾಲತಾಣಗಳಲ್ಲಿ, ವಾರ್ತಾ ಮಾಧ್ಯಮಗಳಲ್ಲಿ ನಾಟಕ ಮಾಡುವ ಅಗತ್ಯವಿಲ್ಲ ಎಂದು ಬಿಜೆಪಿ ದೂರಿದೆ.
ಅಭಿವೃದ್ಧಿ ಯಲ್ಲೇ ಅತ್ಯಂತ ಹಿಂದುಳಿದ ಪ್ರದೇಶ, ವಿದ್ಯಾಭ್ಯಾಸ, ಅರೋಗ್ಯ, ಉದ್ಯೋಗ ಕ್ಕೆ ಈಗಲೂ ಕರ್ನಾಟಕ ವನ್ನು ಅವಲಭಿಸಬೇಕಾದ ಕುಲಗೆಟ್ಟ ಪರಿಸ್ಥಿತಿ ಗೆ ಮಂಜೇಶ್ವರ ಶಾಸಕರೇ ಹೊಣೆ.ಕೇಂದ್ರ ಸರಕಾರ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಬೆಳವಣಿಗೆ ಮಂಜೇಶ್ವರ ವಿಧಾನಸಭಾ ದಲ್ಲಿ ಆಗಿಲ್ಲ ಎಂದು ಆದರ್ಶ ಬಿ ಎಂ ಹೇಳಿದರು.ಕನ್ನಡ ವಿರೋದಿ ನೀತಿಗೆ ಎಡರಂಗ ಹಾಗೂ ಮುಸ್ಲಿಂ ಲೀಗ್ ಮೌನ ಸಮ್ಮತಿ ನೀಡುತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸರಕಾರ ಹಾಗೂ ಶಾಸಕರನ್ನು ಪ್ರಶ್ನೆಸಿದೆ.