ಮಂಜೇಶ್ವರ:ಮಂಗಳೂರು-ಕಾಸರಗೋಡು ಕೆಎಸ್ಸಾರ್ಟೀಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಮಹಿಳೆಯೊಬ್ಬರು ಚಲಿಸುವ ಬಸ್ಸಿನಲ್ಲೇ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಮಂಗಳೂರಿನಿಂದ ಹೊರಟಿದ್ದ ಸಾರಿಗೆ ಬಸ್ಸನ್ನು ಇವರು ಕೈಕಂಬ ಎಂಬಲ್ಲಿ ಹತ್ತಿದ್ದರು. ಕಾಸರಗೋಡಿಗೆ ಟಿಕೆಟ್ ಪಡೆದಿದ್ದ ಇವರು, ಬಸ್ ಕುಂಬಳೆ ತಲುಪುವಷ್ಟರಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಹಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿ ಇವರನ್ನು ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಮೃತ ಮಹಿಳೆಯ ಬಳಿ ಯಾವುದೇ ಗುರುತಿನ ಚೀಟಿಗಳು ಪತ್ತೆಯಾಗಿಲ್ಲ. ಇವರು ಗುಜಿರಿ ಹೆಕ್ಕುವ ತಮಿಳು ಭಾಷಿಕ ಮಹಿಳೆ ಇರಬಹುದೆಂದು ಶಂಕಿಸಲಾಗಿದೆ. ಪ್ರಸ್ತುತ ಮೃತದೇಹವನ್ನು ಕುಂಬಳೆ ಸಹಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಇದ್ದಲ್ಲಿ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ