ಮೀಂಜ–ಮಂಗಲ್ಪಾಡಿ ಸಂಪರ್ಕ ಸೇತುವೆ ನಿರ್ಲಕ್ಷ್ಯ: ಸ್ಥಳ ಪರಿಶೀಲಿಸಿದ ಸುರೇಂದ್ರನ್

ಮಂಜೇಶ್ವರ, ಏಪ್ರಿಲ್ 3: ನಾಲ್ಕು ವರ್ಷಗಳ ಹಿಂದೆ ಕುಸಿದು ಬಿದ್ದರೂ ಇನ್ನೂ ಮರುನಿರ್ಮಾಣವಾಗದ ಮೀಂಜ–ಮಂಗಲ್ಪಾಡಿ ಸಂಪರ್ಕದ ದೇರಂಬಳ ಸೇತುವೆಯನ್ನು Bharatiya Janata Party (ಬಿಜೆಪಿ) ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುರೇಂದ್ರನ್ ಕೆ. ಭೇಟಿ ನೀಡಿ ವೀಕ್ಷಿಸಿದರು.

ಸ್ಥಳ ಪರಿಶೀಲಿಸಿದ ವೇಳೆ ಮಾತನಾಡಿದ ಅವರು, ಸೇತುವೆ ಕುಸಿದು ನಾಲ್ಕು ವರ್ಷ ಕಳೆದರೂ ಪುನರ್ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಸ್ಥಳೀಯ ಜನರು ಸಂಚಾರದ ತೊಂದರೆ ಅನುಭವಿಸುತ್ತಿದ್ದು, ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ., ಲೋಕೇಶ್ ನೋಂಡ, ಕಳ್ಳಿಗೆ ಕರುಣಾಕರ ರೈ, ಜ್ಯೋತಿ ರೈ, ಶಾಲಿನಿ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!