ಬಾಣ್ಯಂಪಾರೆ: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಬಾಣ್ಯಂಪಾರೆ ಉಪಸಂಘದ ಸಮಾಜಬಾಂಧವರು ನಿರ್ಮಿಸಿದ ಮಹಾದ್ವಾರವನ್ನು ನಿನ್ನೆ ಮುಸ್ಸಂಜೆಯ ವೇಳೆ ಉದಯಗಿರಿ ಶ್ರೀ ಮಹಾಕಾಳಿ ಕ್ಷೇತ್ರಕ್ಕೆ ಭಕ್ತಿಪೂರ್ವಕವಾಗಿ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಸ್ಕರ ನಂಬಿಯಾರ್ಡ್ಕ ಅವರು ಅಧ್ಯಕ್ಷತೆ ವಹಿಸಿದರು. ವಾಣಿಯಂಪಾರೆ ಉಪಸಂಘದ ಕಾರ್ಯದರ್ಶಿ ಜಗದೀಶ್ ಸ್ವಾಗತಿಸಿದರು. ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಜಗದೀಶ್ ಕೂಡ್ಲು, ಕಾಸರಗೋಡು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಕಮಲಾಕ್ಷ ಅಣಂಗೂರು ಉಪಸ್ಥಿತರಿದ್ದರು.
ವಾಣಿಯಂಪಾರೆ ಉಪಸಂಘದ ಖಜಾಂಚಿ ವಿಠಲ್ ಗೌರವಾರ್ಪಣೆ ಸಲ್ಲಿಸಿದರು. ಜಿಲ್ಲಾ ಸಂಘದ ಜೊತೆ ಕಾರ್ಯದರ್ಶಿ ಪ್ರಭಾಶಂಕರ ಬೆಲೆಗೆದ್ದೆ, ಕೆ. ಸುಬ್ರಾಯರಾವ್ ಹಾಗೂ ಉಪೇಂದ್ರ ಕಲ್ಲಿಂಗಾಲ್ ಶುಭ ಹಾರೈಕೆ ಮಾಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ವಾಣಿಯಂಪಾರೆ ಉಪಸಂಘದ ಜೊತೆ ಕಾರ್ಯದರ್ಶಿ ಯೋಗೀಶ್ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಊರಿನ ಅನೇಕ ಸಮಾಜಬಾಂಧವರು ಉಪಸ್ಥಿತರಿದ್ದರು.