ಗಡಿನಾಡು ಕಾಸರಗೋಡಿನ ಹೆಮ್ಮೆಯ ಕನ್ನಡ ಸಂಸ್ಥೆ ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗಳಿಗೆ, ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿನಂದನೆ-ಗೌರವಾರ್ಪಣೆ

ಕಾಸರಗೋಡು : ಗಡಿನಾಡು ಕಾಸರಗೋಡಿನ ನುಳ್ಳಿಪ್ಪಾಡಿಯ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಕ್ಕೆ ಇದೀಗ 25ವರ್ಷ. ರಜತ ಸಂಭ್ರಮ ವರ್ಷದಲ್ಲಿ ಸುಮಾರು 40ಕನ್ನಡ ಕಾರ್ಯಕ್ರಮಗಳನ್ನು ಕಾಸರಗೋಡು ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೂರೈಸಿದ ಹೆಮ್ಮೆ ಕನ್ನಡ ಭವನಕ್ಕೆ. 26.7.2026.ರಂದು ರಜತ ಸಂಭ್ರಮ ಸಮಾರೋಪ ಪ್ರಯುಕ್ತ “ಕರ್ನಾಟಕ -ಗಡಿನಾಡು ಕನ್ನಡ ಸಮ್ಮೇಳನ “ಆಯೋಜಿಸಿ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಕನ್ನಡ ಮುಂದಾಳುಗಳನ್ನು ವಿವಿಧ ಪ್ರಶಸ್ತಿಗಳ, ಕಲಾವಿದರನ್ನ ಕಲಾಪ್ರದರ್ಶನಕ್ಕೆ ವೇದಿಕೆ ಒದಗಿಸಿ ಸಮಾರೋಪ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ, ಡಾ. ಸಿ. ಸೋಮಶೇಖರ್ ಸರ್ವಾಧ್ಯಕ್ಷತೆಯಲ್ಲಿ ಕನ್ನಡ ಮೆರವಣಿಗೆ ಯೊಂದಿಗೆ ನಡೆದಿತ್ತು.


ಈ ಸಮ್ಮೇಳನ ವೇದಿಕೆಯಲ್ಲಿ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ,ಕನ್ನಡ ಭವನವನ್ನು ಹಾಗೂ ಇದರ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ – ಸಂದ್ಯಾ ರಾಣಿ ದಂಪತಿಗಳಿಗೆ,”ಹಲ್ಮಿಡಿ ಶಾಸನದ ಬ್ರಿಹತ್ ಸ್ಮರಣಿಕೆ, ಹಾರ, ಶಾಲು, ಪ್ರಮಾಣಪತ್ರ ದೊಂದಿಗೆ ಪ್ರಾಧಿಕಾರದ ದೀರ್ಘ ಕಾಲದ ಕಾರ್ಯದರ್ಶಿ ಶ್ರೀ ಪ್ರಕಾಶ್ ಮತ್ತಿಹಳ್ಳಿ ಅಭಿನಂದಿಸಿ, ಗೌರವಿಸಿದರು. ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಡಾ. ಸೋಮಶೇಖರ್ ಐ. ಎ. ಎಸ್. ಇವರು ಕೂಡಾ ಗೌರವಅರ್ಪಣೆಯ ಬಾಗವಾದರು. ಎಡನೀರು ಶ್ರೀಗಳು ಸಹಿತ ಕರ್ನಾಟಕ, ಕೇರಳದ ಗಣ್ಯಮಾನ್ಯ ಕನ್ನಡ ಕಟ್ಟಾಳುಗಳು ಅಭಿನಂದನೆಗೆ ಸಾಕ್ಷಿಯಾದರು. ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ಸ್ವಾಗತಿಸಿ, ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು, ಗೌರವ ಅಧ್ಯಕ್ಷ ಪ್ರದೀಪ್ ಬೇಕಲ್ ಹಾಗೂ ಕನ್ನಡ ಭವನ ನಿರ್ದೇಶಕರಾದ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!