ಹಬ್ಬದ ದಟ್ಟಣೆ ಕಡಿಸಲು ರೈಲುಗಳಿಗೆ ಹೆಚ್ಚುವರಿ ಬೋಗಿಗಳು

ತಿಂಗಳ ರಜೆ ಹಾಗೂ ಹಬ್ಬಗಳ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಉಂಟಾಗುವ ಪ್ರಯಾಣಿಕರ ವಿಪರೀತ ದಟ್ಟಣೆಯನ್ನು ಕಡಿಮೆ ಮಾಡಲು ರೈಲ್ವೆ ಇಲಾಖೆಯು ಮಂಗಳೂರು ಮಾರ್ಗವಾಗಿ ಸಂಚರಿಸುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ.
ಎ.10 ಮತ್ತು 11 ರಂದು ಚೆನ್ನೈನಿಂದ ಹೊರಡುವ ಚೆನ್ನೈ ಎಗ್ಮೋರ್ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16159 ) ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಇರಲಿದೆ.
ಎ. 12 ಮತ್ತು 13 ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್ – ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16160 ) ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲಾಗುವುದು.


ಎ. 10, 11, 12, 14 ಮತ್ತು 15 ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಾವೇಲಿ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್ – ತಿರುವನಂತಪುರಂ ಸೆಂಟ್ರಲ್ ರೈಲು (ರೈಲು ಸಂಖ್ಯೆ 16603 )ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಸೇರಿಸಲಾಗುವುದು.
ಎ. 11, 12, 13, 15 ಮತ್ತು 16 ರಂದು ತಿರುವನಂತಪುರಂ ಸೆಂಟ್ರಲ್ ಹೊರಡುವ ತಿರುವನಂತಪುರ ಸೆಂಟ್ರಲ್ – ಮಂಗಳೂರು ಸೆಂಟ್ರಲ್ ( ರೈಲು ಸಂಖ್ಯೆ 16604 ) ಮಾವೇಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಇರಲಿದೆ.
ಎ.8ರಿಂದ 15 ರವರೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ (ರೈಲು ಸಂಖ್ಯೆ 16630 )ಮಂಗಳೂರು ಸೆಂಟ್ರಲ್ – ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲಾಗುವುದು.
ಎ.9 ರಿಂದ 16 ರವರೆಗೆ ತಿರುವನಂತಪುರಂನಿಂದ ಹೊರಡುವ ತಿರುವನಂತಪುರಂ – ಮಂಗಳೂರು ಸೆಂಟ್ರಲ್ (ಸಂಖ್ಯೆ 16629 ) ಮಲಬಾರ್ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲು ನಿರ್ಧರಿಸ ಲಾಗಿದೆ ಎಂದು ರೈಲ್ವೆ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!