ಮೂಡಂಬೈಲ್ ನಲ್ಲಿ ಪಜಿಂಗಾರ್ ಸಾಲಿಯಾನ್ ಕುಟುಂಬದ ನೂತನ ತರವಾಡಿನ ಗ್ರಹಪ್ರವೇಶ , ಬ್ರಹ್ಮಕಲಶ ಪ್ರತಿಷ್ಠೆ ಹಾಗು ನೇಮೋತ್ಸವ

ಮಂಜೇಶ್ವರ: ಮೂಡಂಬೈಲ್ ಪಜಿಂಗಾರ್ ಸಾಲಿಯಾನ್ ಕುಟುಂಬದ ನೂತನ ತರವಾಡಿನ ಗ್ರಹಪ್ರವೇಶ, ಬ್ರಹ್ಮಕಲಶ ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯಕ್ರಮಗಳು ಏಪ್ರಿಲ್ 12 ಆದಿತ್ಯವಾರದಂದು ಭಕ್ತಿಭಾವದಿಂದ ನಡೆಯಲಿವೆ. ಇದರ ಪೂರ್ವಭಾವಿಯಾಗಿ ಏಪ್ರಿಲ್ 11ರಂದು ತಂತ್ರಿಗಳ ಉಪಸ್ಥಿತಿಯಲ್ಲಿ ಸ್ಥಳ ಶುದ್ಧಿ, ಪುಣ್ಯವಚನ, ಕಲಶಶುದ್ಧಿ, ವಾಸ್ತು ಹೋಮ ಮತ್ತು ವಾಸ್ತು ಬಲಿ ವಿಧಿವಿಧಾನಗಳು ನೆರವೇರಲಿವೆ.


ಏಪ್ರಿಲ್ 12ರಂದು ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲ ಕೃಷ್ಣ ತಂತ್ರಿಯವರ ಸಾನ್ನಿಧ್ಯದಲ್ಲಿ ಬೆಳಗ್ಗೆ 8:45ಕ್ಕೆ ಗ್ರಹಪ್ರವೇಶ ನಡೆಯಲಿದೆ. ಬಳಿಕ 9:10ರಿಂದ 10:19ರವರೆಗೆ ಪ್ರತಿಷ್ಠೆ, ಬ್ರಹ್ಮಕಲಶ, ಮುಡಿಪು ಸೇವೆ ಹಾಗೂ ತಂಬಿಲ ಸೇವೆಗಳು ನಡೆಯಲಿದ್ದು, ನಂತರ ಮಹಾಪೂಜೆ ನೆರವೇರಲಿದೆ.
ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 3:30ಕ್ಕೆ ಮಲರಾಯ ದೈವದ ನೇಮ ನಡೆಯಲಿದೆ. ಸಂಜೆ 6:00ಕ್ಕೆ ಪಂಜುರ್ಲಿ-ಕಲ್ಲುರ್ಟಿ ದೈವದ ಕೋಲ ಸೇವೆ, ರಾತ್ರಿ 8:00ಕ್ಕೆ ಅನ್ನಪ್ರಸಾದ ಹಾಗೂ ರಾತ್ರಿ 10:00ಕ್ಕೆ ಗುಳಿಗ ದೈವದ ಕೋಲ ಸೇವೆ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕುಟುಂಬದವರು ಆಹ್ವಾನ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!