ಬಿಲ್ಡಿಂಗ್ ಕಂಟ್ರಾಕ್ಟರ್ ಕಟ್ಟೆಬಜಾರ್ ನಿವಾಸಿ ವೆಂಕಟೇಶ್ ಹೃದಯಾಘಾತಕ್ಕೆ ಬಲಿ

ಮಂಜೇಶ್ವರ; ಹೊಸಂಗಡಿ ಕಟ್ಟೆಬಜಾರ್ ನಿವಾಸಿ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿ ಖ್ಯಾತಿ ಪಡೆದಿರುವ ವೆಂಕಟೇಶ್ (58) ಇಂದು ಬೆಳಗ್ಗಿನ ಜಾವಾ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ನಿನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದು ಇಂದು ಬೆಳಗ್ಗೆ ಮಂಚದಿಂದ ಕೆಳಗೆ ಕುಸಿದು ಬಿದ್ದಿದ್ದಾರೆ.

ತಕ್ಷಣ ಸ್ಥಳೀಯರು ಹೊಸಂಗಡಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮುಂದಿನ ಚಿಕಿತ್ಸೆಗೆ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಇವರು ಕಟ್ಟೆಬಜಾರ್ ನಿವಾಸಿ ದಿ. ಸೀತಾರಾಮ ಮತ್ತು ದಿ. ಲೀಲಾವತಿ ಪುತ್ರನಾದ ಇವರು ಪತ್ನಿ ಸಜಿನ ಮಕ್ಕಳಾದ ಶರಣ್ , ಅರ್ಜುನ್ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.


ಕಳೆದ 25 ವರ್ಷಗಳಿಂದ ಹೊಸಂಗಡಿ ಪೇಟೆಯಲ್ಲಿ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿ ಹೆಸರುವಾಸಿಯಾಗಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!