ಕನ್ನಡ ಭವನದ ರೂವಾರಿ ಸಂಧ್ಯಾರಾಣಿ ಟೀಚರಿಗೆ “ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ. 2026

ಕಾಸರಗೋಡು :ಕಥಾಬಿಂದು ಪ್ರಕಾಶನ, ಉಡುಪಿ ಶಿರೂರು ಶ್ರೀ ಮಠ, ಉಡುಪಿ ಶ್ರೀ ಕೃಷ್ಣ ಮಠ ಸಹಯೋಗದಲ್ಲಿ ನಡೆದ “ಕಥಾಬಿಂದು ಸಾಹಿತ್ಯ ಸಮ್ಮೇಳನ “ಉಡುಪಿ ಶ್ರೀ ಮಠದ ರಾಜಾ0ಗಣದಲ್ಲಿ 12.4.2026 ರಂದು ಉಡುಪಿ ಶ್ರೀ ಮಠದ ಶ್ರೀ ರಮಣ ಆಚಾರ್ಯ ಅವರ ಸರ್ವಾಧ್ಯಕ್ಷತೆಯಲ್ಲಿ, ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ, ಡಾ. ಹರಿಕೃಷ್ಣ ಪುನಃರೂರು, ಕ. ಸಾ. ಪ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಅಧ್ಯಕ್ಷ, ಕಲ್ಕೂರ ಪ್ರತಿಷ್ಠಾನ ರೂವಾರಿ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ ಭುವನಬಿರಾಮ ಉಡುಪ, ಕನ್ನಡ ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಸಂಚಾಲಕ, ಜಯಾನಂದ ಪೆರಾಜೆ, ಕನ್ನಡ ಚು. ಸಾ. ಪ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಕೊಳಚಪ್ಪೆ ಗೋವಿಂದ ಭಟ್, ಕಥಾಬಿಂದು ಪ್ರಕಾಶನ ರೂವಾರಿ ಪಿ. ವಿ. ಪ್ರದೀಪ್ ಕುಮಾರ್, ಕಾಸರಗೋಡು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಮುಖ್ಯ ಅತಿಥಿಗಳಾಗಿದ್ದರು. ಶಿರೂರು ಮಠ ವ್ಯವಸ್ಥಾಪಕ ಶ್ರೀ ಭಾಗವತ್, ಸರ್ವಾಧ್ಯಕ್ಷ ಶ್ರೀ ರಮಣ್ ಆಚಾರ್ಯ, ಶ್ರೀ ಹರಿಕೃಷ್ಣ ಪುನರೂರು ಶ್ರೀಮತಿ ಸಂಧ್ಯಾರಾಣಿ ಟೀಚರ್ ಇವರೀಗೆ ಶಾಲು, ಸ್ಮರಣಿಕೆ, ಪ್ರಮಾಣಪತ್ರ, ಫಲತಾಂಬೂಲ ದೊಂದಿಗೆ “ಉಡುಪಿ ಶ್ರೀ ಮಠದ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ “ಪ್ರದಾನ ಮಾಡಿದರು.


ಸಂಧ್ಯಾ ರಾಣಿ ಟೀಚರ್ ಇವರೀಗೆ ಕರ್ನಾಟಕ ಸರಕಾರದ ಗಡಿ ಪ್ರದೇಶ ಪ್ರಾಧಿಕಾರದ ಗಡಿ ಚೇತನ ಪುರಸ್ಕಾರ ಅಂತರ್ದೇಶೀಯ ಮಟ್ಟದಲ್ಲಿ ದುಬಾಯ್ ಯಲ್ಲಿ, ಕಾಸರಗೋಡು ಜಿಲ್ಲಾ ಮಹಿಳಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಇತ್ತೀಚಿಗೆ ಕರ್ನಾಟಕದ ಪ್ರತಿಷ್ಠಿತ “ಹೊಯ್ಸಳ ಪ್ರಶಸ್ತಿ ಸಹಿತ ಹತ್ತಾರು ಪ್ರಶಸ್ತಿ, ಗೌರವಾರ್ಪಣೆಗಳಿಗೆ ಇವರು ಬಾಜನರಾಗಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!