ಬೆಜ್ಜ ಶ್ರೀ ಧೂಮಾವತಿ ಬಂಟ ದೈವಗಳ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವ ಸಂಪನ್ನ

ಮಂಜೇಶ್ವರ : ಬೆಜ್ಜ ಶ್ರೀ ಧೂಮಾವತಿ ಬಂಟ ದೈವಗಳ ಕ್ಷೇತ್ರದಲ್ಲಿ ನಡೆದ ವಾರ್ಷಿಕ ಜಾತ್ರೋತ್ಸವ ಭಕ್ತಿಭಾವದ ನಡುವೆ ಭವ್ಯವಾಗಿ ಸಂಪನ್ನಗೊಂಡಿತು .ಏಪ್ರಿಲ್ 1ರಂದು ಉತ್ಸವದ ಗೊನೆ ಮುಹೂರ್ತ, ಕೋಳಿಗೂಟ ಹಾಗೂ ಉತ್ಸವದ ಚೆಂಡು ಕಾರ್ಯಕ್ರಮಗಳೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಏಪ್ರಿಲ್ 6ರಿಂದ 9ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಏಪ್ರಿಲ್ 6ರಂದು ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆದಿದ್ದು, ಶಾರದಾ ಆರ್ಟ್ಸ್ ತಂಡದಿಂದ ತುಳು ಹಾಸ್ಯಮಯ ನಾಟಕ “ಒಂತೆ ಲೇಟಾ0ಡ್ ” ಪ್ರದರ್ಶನ ಕಂಡಿತು.

ಏಪ್ರಿಲ್ 7ರಂದು ಸ್ವರಗಾನ ಸಂಗೀತ ಬಳಗ, ಕಾಸರಗೋಡು ಇವರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮ ನಡೆದಿದ್ದು, ಡಿವೈನ್ ಡ್ಯಾನ್ಸರ್ಸ್, ಪಟ್ಟತುರ್ ತಂಡದಿಂದ ಕೈಕೊಟ್ಟಿಕಳಿ ನೃತ್ಯ ಭಕ್ತರನ್ನು ರಂಜಿಸಿತು. ಇದೇ ದಿನ ರಾತ್ರಿ 9 ಗಂಟೆಗೆ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ “ವೀರ ಅಭಿಮನ್ಯು ಕರ್ಣಾವಸಾನ ರಕ್ತರಾತ್ರಿ” ಯಕ್ಷಗಾನ ಪ್ರದರ್ಶನ ಜರುಗಿತು.

ಏಪ್ರಿಲ್ 8ರಂದು ರಾಗ ಸುಧಾ ಸಂಗೀತ ಶಾಲೆ, ಹೊಸಂಗಡಿ ಇವರಿಂದ “ಗೀತಾ ಸಂಗೀತ ವೈಭವ” ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ದೈವಗಳ ಒಲಸರಿ ನೆರವೇರಿತು.

ಉತ್ಸವದ ಅವಧಿಯಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದೈವಗಳ ಆಶೀರ್ವಾದ ಪಡೆದರು. ಸ್ಥಳೀಯರು ಹಾಗೂ ಸಂಘಟಕರು ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!