ಕಾಸರಗೋಡು : ಅಡ್ಕ ಬಂದ್ಯೋಡು ವೀರನಗರದಲ್ಲಿರುವ ಶ್ರೀ ನಾಗರಾಜ, ನಾಗಕನ್ನಿಕೆ, ರಕ್ತೇಶ್ವರಿ ಹಾಗೂ ಗುಳಿಗಜ್ಜ ಮತ್ತು ಕೊರಗಜ್ಜ ದೈವಗಳ ಸಾನಿಧ್ಯದಲ್ಲಿ ಏಪ್ರಿಲ್ 25ರಂದು ವಾರ್ಷಿಕ ದಿನಾಚರಣೆ ಹಾಗೂ ಕೋಲೋತ್ಸವ ಭಕ್ತಿಶ್ರದ್ದೆಯಿಂದ ನಡೆಯಲಿದೆ.
ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ (ಕೊಂಡೆವೂರು) ಅವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಸಾನಿಧ್ಯದ ತಂತ್ರಿವರ್ಯರಾದ ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯ (ಕರ್ಕುಳಮನೆ ಬಂಬ್ರಾಣ) ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
ಈ ಸಂದರ್ಭದಲ್ಲಿ ಶ್ರೀ ಸಾನಿಧ್ಯದ ವಾರ್ಷಿಕೋತ್ಸವದ ಜೊತೆಗೆ ಗುಳಿಗಜ್ಜ ಮತ್ತು ಕೊರಗಜ್ಜ ದೈವಗಳ ಕೋಲೋತ್ಸವವೂ ವೈಭವದಿಂದ ನೆರವೇರಲಿದೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ, ದೈವಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.