ಡಾ. ಸಚಿನ್ ಬೇಕಲ್‌ಗೆ “ಭರವಸೆಯ ಭಾರತ ರತ್ನ ಪ್ರಶಸ್ತಿ 2026” ಗೌರವ

ಕಾಸರಗೋಡು : ಆಲ್ ಇಂಡಿಯಾ ಲೆವೆಲ್ನಲ್ಲಿ ರಾಂಕ್ ಗಳಿಸಿ ಮುಂಬೈಯ ಕೆ. ಇ. ಎಮ್. ಆಸ್ಪತ್ರೆಯಲ್ಲಿ ನ್ಯೂರೋಸರ್ಜರಿ ಎಮ್. ಸಿ. ಎಚ್. ಉಪರಿಪಠನಕ್ಕೆ ಆಯ್ಕೆಯಾದ ಕಾಸರಗೋಡು ಅನಂಗೂರು ನಿವಾಸಿಯಾದ, ಡಾ. ಸಚಿನ್ ಬೇಕಲ್ ಇವರೀಗೆ ಕಾಸರಗೋಡು ಕನ್ನಡ ಭವನದ ಸ್ಥಾಪಕ ಸಂಚಾಲಕರಾದ ಡಾ ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ದಂಪತಿಗಳು “ಭರವಸೆಯ ಭಾರತ ರತ್ನ ” ಅಭಿನಂದನಾ ಪ್ರಶಸ್ತಿ ನೀಡಿ ಗೌರವಿಸಿದರು. ಧಾರ್ಮಿಕ ರತ್ನ ಡಾ. ಕೆ. ಏನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದ ಕನ್ನಡ ಭವನ ಪ್ರಕಾಶನದ 3 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ, ಕನ್ನಡ ಭವನ ಗೌರವಾದ್ಯಕ್ಷರಾದ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು.

ಕಾಸರಗೋಡು ನಗರ ಸಭಾ ಕೌನ್ಸಿಲರ್ ಗಳಾದ,, ಸುಧಾ ರಾಣಿ ಅನಂಗೂರ್, ದಿವ್ಯಾ ಸಂದೀಪ್ ನಾಗರಕಟ್ಟೆ, ಮುಖ್ಯ ಅತಿಥಿಗಳಿದ್ದರು. ಆಶಾ ರಾಧಾಕೃಷ್ಣ, ರೇಖಾ ಸುದೇಶ್ ರಾವ್, ವಿದ್ಯಾನಂದ ಹೂಡೆ, ರಾಜೇಶ್ ಕೋಟೆಕಣಿ, ಮುರಳಿ ಪಾರಕಟ್ಟೆ, ಕಮಲಾಕ್ಷ ಅನಂಗೂರ್, ಪ್ರಾಂಶುಪಾಲ ರಾಜೇಶ್ ಚಂದ್ರ, ಉಷಾ ಕಿರಣ್, ದಯಾವತಿ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!