ತುಳುನಾಡಿನ ದೈವಿಕ ಶಕ್ತಿ ಮತ್ತು ಸಾಂಸ್ಕೃತಿಕ ಹಿರಿಮೆಯ ಪ್ರತೀಕಗಳಾದ ‘ಗುತ್ತು’ ಮನೆತನಗಳು, ನಂಬಿಕೆ ಮತ್ತು ಪರಂಪರೆಯ ಜೀವಂತ ನೆಲೆಗಳು. ಅಂತಹ ಶ್ರದ್ಧಾ ಕೇಂದ್ರಗಳಲ್ಲಿ ಒಂದಾದ ಕಾಸರಗೋಡಿನ ಪುಣ್ಯಭೂಮಿಯ ‘ ಬೆಳಿಂಜ ಗುತ್ತು’ ಇಂದು ನವಚೇತನದೊಂದಿಗೆ ಕಂಗೊಳಿಸುತ್ತಿದೆ.
ಹಸಿರು ಸಿರಿಯ ಮಡಿಲಲ್ಲಿರುವ ಈ ಪವಿತ್ರ ತರವಾಡು ಮನೆತನವು ದೈವಿಕ ಸಂಕಲ್ಪದಂತೆ ನವವೈಭವದೊಂದಿಗೆ ಮರುಜನ್ಮ ಪಡೆಯುತ್ತಿದೆ. ವಿದ್ವಾನ್ ಶ್ರೀ ಕೆ. ಬಾಬು ರೈ ಅವರ ಆಶೀರ್ವಚನ ಹಾಗೂ ದೈವಜ್ಞ ಶ್ರೀ ಶಶಿಧರ ಮಾಂಗಾಡ್ ಅವರ ಮಾರ್ಗದರ್ಶನದಂತೆ, ಶ್ರೀ ಬಾಲಕೃಷ್ಣ ಆಳ್ವ ಅವರ ನೇತೃತ್ವದಲ್ಲಿ ತರವಾಡು ಮನೆಯ ಜೀರ್ಣೋದ್ಧಾರ ಕಾರ್ಯಗಳು ಅತ್ಯಂತ ಶ್ರದ್ಧಾಭಕ್ತಿಗಳಿಂದ ಪೂರ್ಣಗೊಳ್ಳತ್ತಾ ಇದೆ.
ಈ ಪರಂಪರೆಯ ಮನೆಯಲ್ಲಿ ದೈವಿಕ ಶಕ್ತಿಗಳು ನೆಲೆನಿಂತು ಭಕ್ತರನ್ನು ಸಲಹುತ್ತಿವೆ. ಇಲ್ಲಿನ ಆರಾಧನಾ ಕೇಂದ್ರಬಿಂದುಗಳೆಂದರೆ:
ಧರ್ಮದೈವ ಜೂಮಾದಿ ಹಾಗೂ ಪಟ್ಟದರಸು ಬೀರ್ಣಾಳ್ವ ಮತ್ತು ಸಪರಿವಾರ ದೈವಗಳು: ಈ ಮಣ್ಣಿನ ಪ್ರಧಾನ ಶಕ್ತಿಗಳಾಗಿ ನೆಲೆನಿಂತು ಭಕ್ತಾದಿಗಳಿಗೆ ಅಭಯ ನೀಡುತ್ತಿದ್ದಾರೆ.
ಈ ಪವಿತ್ರ ಸನ್ನಿಧಿಯಲ್ಲಿ ಏಪ್ರಿಲ್ 28 ರಿಂದ ಮೇ 01. ರವರೆಗೆ ಅದ್ಧೂರಿ ‘ಧರ್ಮ ನೇಮೋತ್ಸವ’ ಜರಗಲಿದೆ. ಇದಕ್ಕಾಗಿ ತರವಾಡು ಮನೆಯ ಅಂಗಳದಲ್ಲಿ ಸಕಲ ಸಿದ್ಧತೆಗಳು ಸಂಭ್ರಮದಿಂದ ಪೂರ್ಣಗೊಳ್ಳುತ್ತಿವೆ. ಭಕ್ತಿಯ ಪರಾಕಾಷ್ಠೆ ಮತ್ತು ಸಾಂಸ್ಕೃತಿಕ ಆಚರಣೆಗಳ ಈ ಸಂಗಮವು ಇಡೀ ಪರಿಸರದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ.
”ಕುಟುಂಬದ ಐಕ್ಯತೆ ಮತ್ತು ಹಿರಿಯರ ಹಾರೈಕೆಯ ಬಲದೊಂದಿಗೆ ನೆರವೇರುತ್ತಿರುವ ಈ ಪುಣ್ಯ ಕಾರ್ಯವು, ಭಕ್ತಾದಿಗಳ ಹಾಗೂ ಕುಟುಂಬಿಕರ ಬಾಳಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎನ್ನುವುದೇ ಸದಾಶ
✍️ : ದಯಾನಂದ ರೈ ಕಳ್ವಾಜೆ