ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ಶ್ರೀ ಭಗವತೀ ಮಾತೆ ಹಾಗೂ ಪರಿವಾರ ದೈವಗಳ ಪುನರ್‌ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕೋತ್ಸವವು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ನೆರವೇರಿತು.
ಬಡಾಜೆ ಬೂಡು ಶ್ರೀ ಮಹಾಗಣಪತಿ ದೇವರ ಅನುಗ್ರಹದಿಂದ ಹಾಗೂ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿ ಅವರ ದಿವ್ಯಹಸ್ತದಿಂದ, ಡಾ ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಏಪ್ರಿಲ್ 18ರಿಂದ 23ರವರೆಗೆ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವವು ಜರುಗಿತು
ಏಪ್ರಿಲ್ 18ರಂದು ಹಸಿರು ಹೊರೆಕಾಣಿಕೆ ಶೋಭಾ ಯಾತ್ರೆಯೊಂದಿಗೆ ಆರಂಭವಾದ ಬ್ರಹ್ಮಕಲಶೋತ್ಸವ ಏಪ್ರಿಲ್ 19,20 21,22ರಂದು ಧಾರ್ಮಿಕ ಕಾರ್ಯಕ್ರಮಗಳಾದ ಹೋಮ-ಹವನಗಳು, ವಿಶೇಷ ಪೂಜೆಗಳು ಹಾಗೂ ವಿವಿಧ ಧಾರ್ಮಿಕ ಆಚರಣೆಗಳು ನಡೆದವು. ಏಪ್ರಿಲ್ 23ರಂದು ಬೆಳಗ್ಗೆ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಅದ್ದೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು. ದೇವಸ್ಥಾನದ ಆವರಣದಲ್ಲಿ ಭಕ್ತಿಭಾವದ ವಾತಾವರಣ ತಲೆದೋರಿದ್ದು, ಸ್ಥಳೀಯ ಮತ್ತು ಅಂತಾರಾಜ್ಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಿದವು
ಇದೀಗ ಭರಣಿ ಮಹೋತ್ಸವಕ್ಕೆ ಸಜ್ಜಾಗಿದ್ದು ಏಪ್ರಿಲ್ 24ರಿಂದ 29ರವರೆಗೆ ಭರಣಿ ಮಹೋತ್ಸವ ನಡೆಯಲಿದೆ, ಚಪ್ಪರ ಮುಹೂರ್ತದಿಂದ ಆರಂಭವಾಗುವ ಉತ್ಸವವು ಏಪ್ರಿಲ್ 27 ರಂದು ಬೆಳಗ್ಗೆ ನಡೆಯುವ ಧ್ವಜಾರೋಹಣದೊಂದೊಂದಿಗೆ ಭರಣಿ ಮಹೋತ್ಸವ ಅದ್ದೂರಿಯಾಗಿ ಆರಂಭ ಗೊಂಡು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ .