ಕಾಸರಗೋಡು: ಉತ್ತರ ಕೇರಳವು ಧಾರ್ಮಿಕ ಆಚಾರ ವಿಚಾರಗಳಿಗೆ ಪ್ರಸಿದ್ದಿಯನ್ನು ಪಡೆದ ತಾಣವಾಗಿದೆ . ಕೇರಳದಲ್ಲಿ ಮತ್ಯಾವುದೇ ಕ್ಷೇತ್ರದಲ್ಲಿ ಕಾಣ ಸಿಗದ ಪಂಚದೇವರ ಉತ್ಸವ ಮೂರ್ತಿಗಳ ಭೂತ ಬಲಿಯು ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಾರಿ ವಾರಿಕಾಟಪ್ಪನ್ ಮಹಿಷಮರ್ಧಿನಿ ಕ್ಷೇತ್ರದಲ್ಲಿ ನಾವು ಕಾಣುತ್ತೇವೆ .
ಪುರಾಣ ಪ್ರಸಿದ್ಧ ಕ್ಷೇತ್ರವನ್ನು ಬ್ರಹ್ಮಶ್ರೀ ಬಾರಿಕ್ಕಾಡುತ್ತಾಯರ ದಿವ್ಯ ಅನುಪಸ್ಥಿಯಲ್ಲಿ ಕ್ಷೇತ್ರ ಕಾರ್ಯಗಳು ನಡೆಯುತ್ತದೆ . ಶ್ರೀ ಮಹಾ ಗಣಪತಿ , ಶ್ರೀ ಧರ್ಮಶಾಸ್ತ್ರ , ಶ್ರೀ ಮಹಾ ವಿಷ್ಣು , ಶ್ರೀ ಮಹಿಷಾಮರ್ಧಿನಿ , ಶ್ರೀ ಮಹಾದೇವ ಎಂಬೀ ಪಂಚ ದೇವರುಗಳ ಆರಾಧನೆ ನಡೆಯುವುದರಿಂದ ಪಂಚ ದೇವರ ಪಾವನ ಭೂಮಿಯೆಂದು ಕರೆಯಲ್ಪಡುತ್ತದೆ . ಶ್ರೀ ಸನ್ನಿಧಿಯಲ್ಲಿ ಮೇಷ ಮಾಸದ ವಾರ್ಷಿಕ ಜಾತ್ರೆಯಂದು ೫ ಉತ್ಸವ ಮೂರ್ತಿಗಳ ಬಲಿ ನರ್ತನ ಸೇವೆಯು ನಡೆಯುತ್ತದೆ . ಇದು ಕೇರಳ ರಾಜ್ಯದ ಬೇರೆ ಯಾವುದೇ ಸನ್ನಿದಿಯಲ್ಲಿ ಇಂತಹ ಅಪರೂಪದ ವಿದ್ಯಮಾನ ನಡೆಯುವುದಿಲ್ಲ . ಶ್ರೀ ಕ್ಷೇತ್ರದಲ್ಲಿ ಮಹಿಷಮರ್ದಿನಿ ಗುಡಿಯು ಪ್ರತೇಕವಾಗಿದ್ದು ಪಡುವಣ ದಿಕ್ಕಿಗೆ ಮುಖಮಾಡಿದೆ . ಉಳಿದ ೪ ಉಪದೇವರುಗಳಿಗೆ ಪ್ರತೇಕವಾದ ಗುಡಿಯಿದ್ದು ಅದು ಮೂಡಣ ದಿಕ್ಕಿಗೆ ಮುಖಮಾಡಿದೆ .
.ವಾರ್ಷಿಕ ಜಾತ್ರಾ ಮಹೋತ್ಸವ ಮೇ 8 ಮತ್ತು 9 ಕ್ಕೆ ….!
ಚಿತ್ತಾರಿ ಶ್ರೀ ಬಾರಿಕಾಟಪ್ಪನ್-ಮಹಿಷಮರ್ದಿನಿ ದೇವಸ್ಥಾನ ಬಾರಿಕ್ಕಾಡು ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಮೇ 8 ಶುಕ್ರವಾರ ಮತ್ತು 9 ಶನಿವಾರದ ದಿನಗಳಂದು ವಿವಿಧ ವೈದಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ . ಆ ಪ್ರಯುಕ್ತ ಭಗವತಕ್ತರಾದ ತಾವೆಲ್ಲರೂ ಪುಣ್ಯಪ್ರದವಾದ ಈ ದೇವತಾ ಮಹತ್ ಕಾರ್ಯದಲ್ಲಿ ಬಂಧುಬಾಂಧವರೊಂದಿಗೆ ಕುಟುಂಬ ಸಮೇತರಾಗಿ ಚಿತ್ತೈಸಿ ತನು, ಮನ, ಧನಗಳಿಂದ ಸಹಕರಿಸಿ, ಸಿರಿಮುಡಿಗಂದ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ದೇವಳದ ಆಡಳಿತ ಮಂಡಳಿ ಕೇಳಿಕೊಂಡಿದೆ .
ಗಿರೀಶ್ ಪಿಎಂ, ಕಾಸರಗೋಡು