ಎಂಡಿಎಂಎ ಹಾಗೂ ಅರ್ಧಲಕ್ಷದಷ್ಟು ಹಣದೊಂದಿಗೆ ಯುವಕ ಸೆರೆ

ಮಂಜೇಶ್ವರ : ಮಾದಕ ವಸ್ತುಗಳ ವಿರುದ್ಧ ಕಠಿಣ ಸಮರ ಸಾರಿರುವ ಮಂಜೇಶ್ವರ ಪೊಲೀಸರು, ಮತ್ತೊಂದು ಕಾರ್ಯಾಚರಣೆಯಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯ ಬಿಸ್ಮಿಲ್ಲಾ ಮಂಜಿಲ್ ನಿವಾಸಿ ಮೊಹಮ್ಮದ್ ಸಮೀರ್ ಪಿ.ಎ (30) ಬಂಧಿತ ಆರೋಪಿ.

​ಖಚಿತ ಮಾಹಿತಿ ಮೇರೆಗೆ ಬಪ್ಪಾಯಿತೊಟ್ಟಿಯಲ್ಲಿ ನಡೆಸಿದ ದಾಳಿಯ ವೇಳೆ, ಈತನಿಂದ 5.080 ಗ್ರಾಂ ಎಂಡಿಎಂಎ ಹಾಗೂ ಮಾರಾಟದ ಹಣ 55,860 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಜೇಶ್ವರ ಪೋಲೀಸರ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ. ಆರೋಪಿಯ ವಿರುದ್ಧ ಈಗಾಗಲೇ ಕಾಸರಗೋಡು ನಗರ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!