ಕುಂಬಳೆ: ಕೇರಳದಲ್ಲಿ ಮಾರಾಟ ನಿಷೇಧಿತವಾಗಿರುವ ಕರ್ಣಾಟಕ ನಿರ್ಮಿತ ಮದ್ಯವನ್ನು ಸಾಗಿಸುತ್ತಿದ್ದ ಇಬ್ಬರನ್ನು ಎಕ್ಸೈಸ್ ಇಲಾಖೆ ಪತ್ತೆಹಚ್ಚಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಮತ್ತೊಬ್ಬರು ಪರಾರಿಯಾಗಿದ್ದಾರೆ.
ತಲಪಾಡಿ ತಚ್ಚನಿ ನಿವಾಸಿ ನಿಖಿಲ್ ಬಂಧಿತ ಆರೋಪಿಯಾಗಿದ್ದು, ವಿಧಾನಸಭಾ ಚುನಾವಣೆಯ ಹಿನ್ನೆಲೆ ನಡೆಯುತ್ತಿದ್ದ ತಪಾಸಣೆ ವೇಳೆ ಅವರಿಂದ ಸುಮಾರು 159 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಇದೇ ವೇಳೆ, ಎರಡನೇ ಆರೋಪಿಯಾದ ಕುಂಟಾಂಗಿರಡ್ಕ ನಿವಾಸಿ ಪ್ರಭಾಕರನ್ ಅಲಿಯಾಸ್ ಅನ್ನಿ ಪ್ರಭಾಕರನ್ ಪರಾರಿಯಾಗಿದ್ದಾನೆ. ಪರಾರಿಯಾಗುವ ಸಂದರ್ಭದಲ್ಲಿ ಮದ್ರಸದಿಂದ ಬರುತ್ತಿದ್ದ ಸುಮಾರು 15 ಬಾಲಕಿಯರ ಮುಂದೆ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪ್ರಭಾಕರನ್ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದ್ದು, ಎಕ್ಸೈಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿಯೂ ಆತ ಆರೋಪಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಶ್ರಾವಣ್ ಕೆ.ವಿ., ಎಕ್ಸೈಸ್ ಅಧಿಕಾರಿ ಅಖಿಲೇಶ್ ಎಂ., ಸಿವಿಲ್ ಎಕ್ಸೈಸ್ ಅಧಿಕಾರಿಗಳು ರಾಹುಲ್ ಪಿ. ಹಾಗೂ ಚಾಲಕ ಪ್ರವೀಣ್ ಕುಮಾರ್ ಸೇರಿದಂತೆ ತಂಡ ಭಾಗವಹಿಸಿತ್ತು.