ಮಂಜೇಶ್ವರ : ಕೆ ಸ್ಮಾರ್ಟ್ ಅವ್ಯವಸ್ಥೆ ಸರಿಪಡಿಸಬೇಕು,ಬುಡಮೇಲು ಗೊಂಡಿರುವ ಪಿ ಎಂ ಎ ವೈ ಲೈಫ್ ಭವನ ಯೋಜನೆಯನ್ನು ಕೂಡಲೇ ಸರಿ ಪಡಿಸಬೇಕು,ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು, ಪೆನ್ಸನ್ ಅರ್ಜಿಗಳ ಅವಗಣನೆಯನ್ನು ಕೊನೆಗೊಳಿಸಬೇಕು ಸ್ಥಗಿತಗೊಂಡಿರುವ ಅಭಿವೃದ್ದಿ ಯೋಜನೆಗಳನ್ನು ಕೂಡಲೇ ಸರಿ ಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಎಲ್ ಜಿ ಎಂ ಲ್ ಸ್ಥಳೀಯಾಡಳಿತ ಸಂಸ್ಥೆಗಳ ಮುಸ್ಲಿಂ ಲೀಗ್ ಜನಪ್ರತಿನಿಧಿಗಳ ಸಂಘಟನೆ ಯ ನೇತೃತ್ವದಲ್ಲಿ ವರ್ಕಾಡಿ ಗ್ರಾಮ ಪಂಚಾಯತು ಮುಂಬಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು.
ಕೆ ಮೊಹಮ್ಮದ್ ಪಾವೂರು ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿ ಡಿ ಎಂ ಕೆ ಮೊಹಮ್ಮದ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಇಂದು ಕೇರಳ ರಾಜ್ಯಾದ್ಯಂತ ಜನ ಸಾಮಾನ್ಯರಿಗಾಗಿ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಕೇರಳವನ್ನು ಆಳುತ್ತಿರುವ ಎಡರಂಗ ಸರಕಾರದ ಅನಾಸ್ಥೆಯಿಂದ ಯ ಪಂಚಾಯತು ಸದಸ್ಯರಿಗೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
.ಈ ಸಂದರ್ಭ ಮುಖ್ಯ ಅತಿಥಿಯಾಗಿ ಆಗಮಿಸಿದ ವರ್ಕಾಡಿ ಗ್ರಾಮ ಪಂಚಾಯತು ನಿಕಟಪೂರ್ವ ಅಧ್ಯಕ್ಷ ಬಿ ಎ ಅಬ್ದುಲ್ ಮಜೀದ್ ಮಾತನಾಡಿ:ಎಲ್ ಜಿ ಎಂ ಎಲ್ ನೇತೃತ್ವದಲ್ಲಿ ಐಕ್ಯರಂಗದ ಸೇತಾರರನ್ನು ಜೊತೆಯಾಗಿಸಿಕೊಂಡು ನಾವು ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ. ದಿನದಿಂದ ದಿನಕ್ಕೆ ಕುಂಠಿತಗೊಳ್ಳುತ್ತಿರುವ ಅಧಿಕಾರದಲ್ಲಿರುವ ಕೇರಳ ಸರಕಾರದ ಅನಾಸ್ಥೆ ವಿರುದ್ಧ ಈ ಪ್ರತಿಭಟನೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಎ ಕೆ ಖಾಲಿದ್ ದುರ್ಗಿ ಪಳ್ಳ, ಇಬ್ರಾಹಿಂ ಧರ್ಮ ನಗರ, ಡಿ ಸೀತ, ಮೂಸ ಕೆದಂಬಾಡಿ, ಸದಾಶಿವ ಸಪಲ್ಯ, ಉಮ್ಮರ್ ಕುಂಞ, ಮೊಹಮ್ಮದ್ ಮಜಾಲ್, ರಹ್ಮತ್ ರಜಾಕ್ ಮೊದಲಾದವರು ಉಪಸ್ಥಿತರಿದ್ದರು.
ರಜಾಕ್ ಕೆದಂಬಾಡಿ, ಎಕೆ ಮಹಮ್ಮದ್, ಉಮ್ಮರ್ ಪಾಲೆಂಗಿ, ಲತೀಫ್ ಪೊಯ್ಯ, ಅಬೂಬಕ್ಕರ್ ಉರ್ಣಿ, ಅಬೂಬಕ್ಕರ್ ಮಾಂಕೋಡಿ, ಹಾರೂನ್ ರಶೀದ್, ರಜಾಕ್, ಅನ್ಸಾರ್ ಮೊದಲಾದವರು ನೇತೃತ್ವ ನೀಡಿದರು.ಪ್ರತಿಭಟನಾ ಧರಣಿಯಲ್ಲಿ ನೇತಾರರು ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು