ಆರಿಕ್ಕಾಡಿ: ತೆರವುಗೊಂಡ ಟೋಲ್‌ಗೇಟ್ : ಆದರೆ ಅಪಾಯಕಾರಿ ಹಂಪ್‌ಗಳ ಕಾಟ ನಿರಂತರ

ಮಂಜೇಶ್ವರ : ಕುಂಬಳೆಯ ಆರಿಕ್ಕಾಡಿಯಲ್ಲಿ ಟೋಲ್‌ಗೇಟ್ ತೆರವುಗೊಂಡು ನಾಲ್ಕು ತಿಂಗಳೇ ಕಳೆದಿದ್ದರೂ, ಅಲ್ಲಿನ ಅವೈಜ್ಞಾನಿಕ ಹಂಪ್‌ಗಳು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿವೆ.ಟೋಲ್ ಇಲ್ಲದ ಕಾರಣ ಅತಿವೇಗದಲ್ಲಿ ಬರುವ ವಾಹನಗಳು, ಇದ್ದಕ್ಕಿದ್ದಂತೆ ಹಂಪ್ ಕಂಡು ಬ್ರೇಕ್ ಹಾಕುತ್ತಿರುವುದು ಸರಣಿ ಅಪಘಾತಗಳಿಗೆ ಕಾರಣವಾಗಿದೆ.

​ ಕಳೆದ ದಿನ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿರುವುದು ಇಲ್ಲಿನ ದುಸ್ಥಿತಿಗೆ ಸಾಕ್ಷಿಯಾಗಿದೆ. ಟೋಲ್‌ಗೇಟ್ ಇಲ್ಲವೆಂದು ತಿಳಿದು ವೇಗವಾಗಿ ಬರುವ ವಾಹನ ಸವಾರರಿಗೆ, ಹತ್ತಿರ ಬಂದಾಗ ಮಾತ್ರ ಹಂಪ್ ಕಾಣಿಸಿಕೊಳ್ಳುತ್ತದೆ. ಇದರಿಂದ ದಿಢೀರ್ ಬ್ರೇಕ್ ಹಾಕುವ ಅನಿವಾರ್ಯತೆ ಉಂಟಾಗಿ ಹಿಂಬದಿಯಿಂದ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತಿವೆ.

ಕಳೆದ ಕೆಲ ದಿನಗಳಲ್ಲಿ ಆರು ಅಪಘಾತಗಳು ನಡೆದಿದ್ದು, ಕೂಡಲೇ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಈ ಅಪಾಯಕಾರಿ ಹಂಪ್‌ಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!