ನೇತಾಜಿ ಸಾರ್ವಜನಿಕ ಗ್ರಂಥಾಲಯ, ಪೆರ್ಲದಲ್ಲಿ ವಾಚನಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಪುಸ್ತಕ ಪರಿಚಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಲೈಬ್ರೇರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಮೊಳಕ್ಕಾಲ್, ಪುಸ್ತಕಗಳು ಜ್ಞಾನ ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ರವಾನಿಸುವ ಅಮೂಲ್ಯ ಸಾಧನಗಳಾಗಿದ್ದು, ಓದುವ ಸಂಸ್ಕೃತಿಯನ್ನು ಕಾಪಾಡಿ ಬೆಳೆಸಬೇಕೆಂದು ಹೇಳಿದರು.

ಮುಖ್ಯ ಅತಿಥಿ ಬಿ.ಸಿ. ಗೋಪಾಲಕೃಷ್ಣ ಭಟ್ ಅವರು ಡಾ. ರಮಾನಂದ ಬನಾರಿ ಸಂಪಾದಿತ ‘ಕನ್ನಡಿಯಲ್ಲಿ ಕನ್ನಡಿಗರು’ ಕೃತಿಯನ್ನು ಪರಿಚಯಿಸಿದರು. ಜಿಲ್ಲಾ ಕೌನ್ಸಿಲ್ ಸದಸ್ಯ ಸಲಾಹುದ್ದೀನ್ ಮಾಸ್ತರ್, ಸಾಹಿತಿಗಳಾದ ಬಾಲಕೃಷ್ಣ ಬೇರಿಕೆ, ಸುಂದರ ಬಾರಡ್ಕ ಹಾಗೂ ಸಮಾಜಸೇವಕ ವಿನೋದ್ ಅಮೇಕ್ಕಳ ಶುಭಾಶಯ ಕೋರಿದರು.
ಎಣ್ಮಕಜೆ ಗ್ರಂಥಾಲಯ ಒಕ್ಕೂಟದ ಕನ್ವೀನರ್ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಲೈಬ್ರೇರಿ ಕೌನ್ಸಿಲ್ ಸದಸ್ಯ ಉದಯ ಸಾರಂಗ ಸ್ವಾಗತಿಸಿ, ಗ್ರಂಥಪಾಲಕಿ ಉಷಾ ವಂದಿಸಿದರು.


