ಪೈವಳಿಕೆಯಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಪ್ರಶಿಕ್ಷಣ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ನಾಯಕ ರವೀಶ ತಂತ್ರಿ ಕುಂಟರು, ಮುಸ್ಲಿಂ ಲೀಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಪೈವಳಿಕೆಯ ಸಜಂಕಿಲದಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಪ್ರಶಿಕ್ಷಣ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ನಾಯಕ ರವೀಶ ತಂತ್ರಿ ಕುಂಟರು, ದೇಶದಲ್ಲಿ ಬಿಜೆಪಿ ಅಲೆ ಮುಂದುವರಿದಿದ್ದು, ಕೇರಳದಲ್ಲೂ ಬಿಜೆಪಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.


ಮುಸ್ಲಿಂ ಲೀಗ್ ಅವಕಾಶವಾದಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕೇರಳದಲ್ಲಿ ಪಕ್ಷಕ್ಕೆ ಸ್ವಂತ ಬಲಕ್ಕಿಂತ ಮೈತ್ರಿ ರಾಜಕೀಯ ಹಾಗೂ ಮತಗಳ ಧ್ರುವೀಕರಣದ ಮೂಲಕ ನಿರ್ಣಾಯಕ ಸ್ಥಾನ ದೊರೆತಿದೆ ಎಂದು ಟೀಕಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ಹರಿಶ್ಚಂದ್ರ ಎಂ., ಪದ್ಮನಾಭ ಕಡಪ್ಪರ, ಮಣಿಕಂಠ ರೈ, ಲೋಕೇಶ್ ನೋಂಡ, ಎ.ಕೆ. ಕಯ್ಯರ್, ಮನುಲಾಲ್ ಮೆಲೋತ್, ಪ್ರವೀಣ್ ಚಂದ್ರ ಬಲ್ಲಾಳ್, ನವೀನ್ ರಾಜ್, ಭಾಸ್ಕರ್ ಪೊಯ್ಯೇ ಹಾಗೂ ಚಂದ್ರವತಿ ಶೆಟ್ಟಿ ಉಪಸ್ಥಿತರಿದ್ದರು.

ಯಾದವ ಬಡಾಜೆ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿದರು.


