ಕುಂಬಳೆ: ಕಾರಿನಲ್ಲಿ ಸಾಗಿಸುತ್ತಿದ್ದ 30 ಕೆಜಿ ಗಾಂಜಾ ಸಮೇತ ಅಂತರ್‌ರಾಜ್ಯ ಅಪರಾಧಿ ಲಾಲಾ ಕಬೀರ್ ಮತ್ತು ಸಹಚರ ಬಂಧನ

ಕಾಸರಗೋಡು : ಆಪರೇಷನ್ ತೂಫಾನ್ ಕಾರ್ಯಾಚರಣೆಯ ಭಾಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಧೀನದಲ್ಲಿರುವ ಡ್ಯಾನ್ಸಾಫ್ (DANSAF) ತಂಡ ಹಾಗೂ ಕುಂಬಳೆ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಅಂತರ್‌ರಾಜ್ಯ ಅಪರಾಧಿ ಲಾಲಾ ಕಬೀರ್ ಮತ್ತು ಅವರ ಸಹಚರನನ್ನು ಬಂಧಿಸಿದ್ದಾರೆ. ಅವರು ಪ್ರಯಾಣಿಸುತ್ತಿದ್ದ Honda City ಕಾರಿನಿಂದ 30 ಕಿಲೋಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಕಾಂಜಂಗಾಡು ಮೂಲದ ಲಾಲಾ ಕಬೀರ್ ಜೊತೆಗೆ ಅವರ ಸಹಚರ ಮೊಹಮ್ಮದ್ ನಿಹಾಲ್ ಕೂಡ ಬಂಧಿತರಾಗಿದ್ದಾರೆ. ರಹಸ್ಯ ಮಾಹಿತಿಯ ಆಧಾರದ ಮೇಲೆ ಇಂದು (ಶನಿವಾರ) ಬೆಳಿಗ್ಗೆ ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿ ಟೋಲ್ ಪ್ಲಾಜಾ ಸಮೀಪ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದ್ದಿದ್ದಾರೆ.

ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್ ಹಾಗೂ ಉಪನಿರೀಕ್ಷಕ ಕೆ.ಪಿ. ಗಣೇಶನ್ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ.ಲಾಲಾ ಕಬೀರ್ ವಿರುದ್ಧ ದರೋಡೆ, ಅಪಹರಣ, ಕ್ವೊಟೇಶನ್ ಗ್ಯಾಂಗ್ ಚಟುವಟಿಕೆ ಸೇರಿದಂತೆ ಅನೇಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಕೇರಳ ಮತ್ತು Karnataka ರಾಜ್ಯಗಳಲ್ಲಿ ಅವರ ವಿರುದ್ಧ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಲಾ ಕಬೀರ್ ಇತ್ತೀಚೆಗಷ್ಟೇ ಮೈಸೂರು ಜೈಲಿನಿಂದ ಬಿಡುಗಡೆಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳು ತನಿಖೆಯೊಂದಿಗೆ ಹೊರಬರಬೇಕಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!