ಊರಿಗೆ ಬರಲು ಟಿಕೆಟ್ ಕಾಯ್ದಿರಿಸಿದ್ದ ಕೊಟ್ಟೋಡಿ ಮೂಲದ ಯುವಕ ಕುವೈತ್‌ನ ವಸತಿಗೃಹದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡ್ : ಕುವೈಟ್ ಸಿಟಿಯ ಅಬ್ಬಾಸಿಯಾ ಪ್ರದೇಶದಲ್ಲಿರುವ ವಸತಿಗೃಹದಲ್ಲಿ ಕಾಸರಗೋಡು ಮೂಲದ ಯುವಕ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಮೃತರನ್ನು ರಾಜಾಪುರಂ ಸಮೀಪದ ಕೊಟ್ಟೋಡಿ ನಿವಾಸಿ ಅನಂತಕೃಷ್ಣನ್ (29) ಎಂದು ಗುರುತಿಸಲಾಗಿದೆ. ಗುರುವಾರ ಮುಂಜಾನೆ ಅವರು ತಮ್ಮ ಫ್ಲ್ಯಾಟ್‌ನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಕಳೆದ ಒಂದು ವರ್ಷದಿಂದ ಅವರು ಕುವೈತ್‌ನ ಖಾಸಗಿ ತರಕಾರಿ ಕಂಪನಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಸ್ವದೇಶಕ್ಕೆ ಮರಳಲು ಈಗಾಗಲೇ ಟಿಕೆಟ್ ಕಾಯ್ದಿರಿಸಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮಾನಸಿಕ ಒತ್ತಡದಿಂದ ಅವರು ಬಳಲುತ್ತಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಮೃತದೇಹವನ್ನು ಸ್ವದೇಶಕ್ಕೆ ತರಲು ಅಗತ್ಯ ಕ್ರಮಗಳು ನಡೆಯುತ್ತಿವೆ.
ಅನಂತಕೃಷ್ಣನ್ ಅವರು ಕೆ. ಚಂದ್ರನ್ ಮತ್ತು ಎ. ಗಂಗಾ ಅವರ ಪುತ್ರ. ಸಹೋದರ: ಅಜಯ್ ಕೃಷ್ಣನ್.

SHARE
Loading spinner

Leave a Reply

Your email address will not be published. Required fields are marked *

error: Content is protected !!