ಬಾಲಕಿಗೆ ಲೈಂಗಿಕ ಕಿರುಕುಳ: ಗಲ್ಫ್‌ಗೆ ಪರಾರಿಯಾಗಲು ಸಜ್ಜಾಗಿದ್ದ ಕಾಮುಕ ಆಟೋ ಚಾಲಕ ಅರೆಸ್ಟ್

​ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ, ಪರಾರಿಯಾಗಲು ಸಿದ್ಧತೆ ನಡೆಸಿದ್ದ ಆಟೋ ಚಾಲಕನನ್ನು ವಿದ್ಯಾನಗರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.ಬಾವಲಿಮನ ಅಮೀ‌ರ್ ಮಂಜಿಲ್‌ನ ಅಬುತಾಹಿರ್ (22) ಬಂಧಿತ ಆರೋಪಿ.
​2022-23ರ ಅವಧಿಯಲ್ಲಿ ಆರೋಪಿ ಬಾಲಕಿಗೆ ನಿರಂತರ ಕಿರುಕುಳ ನೀಡಿದ್ದನು. ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಾಗ ಕುಟುಂಬಸ್ಥರು ಆಕೆಯ ಫೋನ್ ಪರಿಶೀಲಿಸಿದಾಗ ಅಬುತಾಹಿರ್‌ನೊಂದಿಗಿನ ಚಾಟಿಂಗ್ ಬಯಲಾಗಿತ್ತು.

ಕೌನ್ಸಿಲಿಂಗ್ ವೇಳೆ ಅಸಲಿ ವಿಷಯ ಹೊರಬೀಳುತ್ತಿದ್ದಂತೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರು. ಎರಡು ದಿನಗಳಲ್ಲಿ ಗಲ್ಫ್‌ಗೆ ಪರಾರಿಯಾಗಲು ತಯಾರಿ ನಡೆಸಿದ್ದ ಆರೋಪಿಯನ್ನು ವಿದ್ಯಾನಗರ ಇನ್‌ಸ್ಪೆಕ್ಟರ್ ಎಂ.ಪಿ. ವಿಜೀಶ್ ನೇತೃತ್ವದ ತಂಡ ಸೆರೆಹಿಡಿದಿದೆ. ಆರೋಪಿಯ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!