ಮಂಗಳೂರು: ಬಂಗ್ರಕೂಳೂರು ವಿಅರ್ಎಲ್ ಮುಂಭಾಗ ಸ್ಕೂಟರ್ ಗೆ ಹಿಂಭಾಗದಿಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ನವಾರ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ.

ಸವಾರ ರಸ್ತೆಗೆ ಬಿದ್ದಾಕ್ಷಣವೇ ಲಾರಿ ಚಕ್ರ ಸವಾರನ ಮೇಲೆಯೇ ಚಲಿಸಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ದುರ್ಘಟನೆ ಶುಕ್ರವಾರ ಸಂಜೆ ನಡೆದಿದೆ. ಮೃತರನ್ನು ಹಳೆಯಂಗಡಿ ತೋಕೂರು ನಿವಾಸಿ ಸದಾನಂದ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಸದಾನಂದ ಅವರು ತಮ್ಮ ಇವಿ ಸ್ಕೂಟರ್ ನಲ್ಲಿ ಕೂಳೂರಿನಲ್ಲಿ ಬರುತ್ತಿದ್ದಾಗ ದುರಂತ ಸಂಭವಿಸಿದೆ.


